ಕರ್ನಾಟಕ

ನಿಖಿಲ್ ಕುಮಾರಸ್ವಾಮಿಯ ಅದ್ದೂರಿ ನಿಶ್ಚಿತಾರ್ಥ

Pinterest LinkedIn Tumblr


ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ, ಸಂಬಂಧಿ ಎಂ.ಕೃಷ್ಣಪ್ಪ ಪುತ್ರಿ ರೇವತಿ ಜತೆ ಸೋಮವಾರ ನಿಶ್ಚಿತಾರ್ಥ ನಡೆಯಿತು.

ರಾಜಧಾನಿಯ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಿಖಿಲ್, ರೇವತಿ ನಿಶ್ಚಿತಾರ್ಥ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ, ನಿಖಿಲ್ ಅಜ್ಜ ಎಚ್.ಡಿ.ದೇವೇಗೌಡರು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಆಗಮಿಸಿ ಶುಭ ಹಾರೈಸಿದ್ದರು.

ಫೆಬ್ರುವರಿ 6ರಂದು ನಿಖಿಲ್ ಫೇಸ್ ಬುಕ್ ಖಾತೆಯಲ್ಲಿ ರೇವತಿ ಫೋಟೊವನ್ನು ಶೇರ್ ಮಾಡಿದ್ದರು. ಇಂದು ನಡೆದ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟರು, ಸಿನಿಮಾದ ಗಣ್ಯರು ಆಗಮಿಸಿ ಶುಭ ಹಾರೈಸಿದ್ದರು.

Comments are closed.