ಕರ್ನಾಟಕ

ವೈದ್ಯೆ ಪತ್ನಿಯ ಸೆಕ್ಸ್ ವಿಡಿಯೋ ಆನ್‍ಲೈನಲ್ಲಿ ನೋಡಿದ ಟೆಕ್ಕಿ

Pinterest LinkedIn Tumblr


ಬೆಂಗಳೂರು: 32 ವರ್ಷದ ವೈದ್ಯೆ ಟೆಕ್ಕಿ ಪತಿಗೆ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ ಮಾಡಿದ್ದಾಳೆ. ಆದರೆ ಆಕೆಯೇ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಡಿಯೋ ಬಹಿರಂಗವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಇದೀಗ ಟೆಕ್ಕಿ ಪತಿ, ಪತ್ನಿ ವೈದ್ಯೆಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ವೈದ್ಯೆ ತಮ್ಮ ಮದುವೆಯನ್ನು ಉಳಿಸಿಕೊಡಿ ಎಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಪರಿಹಾರ್ ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ಏನಿದು ಪ್ರಕರಣ?
ಮೂಲತಃ ಕೊಲ್ಕತ್ತಾ ಮಹಿಳೆ ಉತ್ತರ ಪ್ರದೇಶದ 33ರ ವ್ಯಕ್ತಿಯನ್ನು ಮಾಟ್ರಿಮೋನಿಯದಲ್ಲಿ ಭೇಟಿ ಆಗಿದ್ದಳು. ನಂತರ ಇಬ್ಬರು ಒಪ್ಪಿ 2018ರಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನನಗೆ ಮದುವೆಗೂ ಮೊದಲೂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದೆ. ಆದರೆ ನಂತರ ಇಬ್ಬರೂ ಬೇರೆಯಾದ್ದೇವೆ ಎಂದು ವೈದ್ಯೆ ಪತಿಗೆ ತಿಳಿಸಿದ್ದಳು. ಹೀಗಾಗಿ ದಂಪತಿ ಕೆಲವು ದಿನ ಇಬ್ಬರೂ ಚೆನ್ನಾಗಿ ಸಂಸಾರ ಮಾಡುತ್ತಿದ್ದರು.

ವೈದ್ಯೆ ಯಾವಾಗಲೂ ಪತಿಗೆ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ ಮಾಡುತ್ತಿದ್ದಳು. ಆದರೆ ಟೆಕ್ಕಿ ಪತಿ ಅಂತಹ ವಿಡಿಯೊಗಳನ್ನು ನೋಡುವ ಅಭ್ಯಾಸ ಹೊಂದಿರಲಿಲ್ಲ. ಕೊನೆಗೆ ಪತ್ನಿಯ ಆಸೆಯನ್ನು ಪೂರೈಸಲು ಪತಿ ಪೋರ್ನ್ ವಿಡಿಯೋ ನೋಡಿದ್ದಾರೆ. ಒಂದು ದಿನ ಪತ್ನಿಯ ಮೊಬೈಲ್ ಫೋನ್‍ನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡಿರುವ ವಿಡಿಯೋವನ್ನು ನೋಡಿ ಶಾಕ್ ಆಗಿದ್ದಾರೆ. ಈ ಬಗ್ಗೆ ಕೇಳಿದಾಗ, ಆತ ನನ್ನ ಮಾಜಿ ಗೆಳೆಯ. ಹಳೆಯ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಮತ್ತೆ ತೊಂದರೆ ಕೊಟ್ಟರೆ ಉಪಯೋಗವಾಗಬಹುದು ಎಂದು ವಿಡಿಯೋ ಇಟ್ಟುಕೊಂಡಿದ್ದೀನಿ ಎಂದು ಹೇಳಿದ್ದಾಳೆ.

ಪತ್ನಿ ವೈದ್ಯೆಯ ಮಾತಿನಿಂದ ಪತಿ ಸಮಾಧಾನವಾಗಿರಲಿಲ್ಲ. ಆದರೆ ಇತ್ತೀಚೆಗೆ ಪತ್ನಿ ಮತ್ತು ಬೇರೊಬ್ಬ ವ್ಯಕ್ತಿಯ ಜೊತೆ ಸೆಕ್ಸ್ ಮಾಡಿರುವ ವಿಡಿಯೋವನ್ನು ಆನ್‍ಲೈನ್‍ನಲ್ಲಿ ನೋಡಿದ್ದಾರೆ. ಈ ಬಗ್ಗೆ ಪತ್ನಿಯ ಬಳಿ ಕೇಳಿದ್ದಾರೆ. ಆಗ ಅವಳು ಮದುವೆಗೆ ಮುನ್ನ ಅನೇಕರ ಜೊತೆ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ ಆನ್‍ಲೈನ್‍ನಲ್ಲಿ ವಿಡಿಯೋ ಹೇಗೆ ಅಪ್ಲೋಡ್ ಆಗಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾಳೆ.

ಕೊನೆಗೆ ಪತಿ ಆಕೆಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಇತ್ತ ಪತ್ನಿ ಪರಿಹಾರ್ ಕೇಂದ್ರವನ್ನು ಸಂಪರ್ಕಿಸಿ ನನ್ನ ಪತಿ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಆರೋಪಿಸಿದ್ದಾಳೆ. ಆಗ ಪರಿಹಾರ್ ಕೇಂದ್ರದ ಹಿರಿಯ ಸಲಹೆಗಾರ್ತಿ ಬಿ.ಎಸ್ ಸರಸ್ವತಿ ದಂಪತಿಯನ್ನು ಮುಖಾಮುಖಿಯಾಗಿ ಕೂರಿಸಿ ಮಾತನಾಡಿಸಿದ್ದಾರೆ.

ಈ ವೇಳೆ ಪತಿ, ನನ್ನ ಪತಿ ಪೋರ್ನ್ ವಿಡಿಯೋ ನೋಡುವುದಕ್ಕೆ ವ್ಯಸನಿಯಾಗಿದ್ದಾಳೆ. ಅಲ್ಲದೇ ನನಗೆ ಅದನ್ನು ಮಾಡುವಂತೆ ಒತ್ತಾಯಿಸಿದಳು. ಜೊತೆಗೆ ಮದುವೆಗೂ ಮುನ್ನ ನಡೆದ ಘಟನೆಗಳನ್ನು ಮುಚ್ಚಿಟ್ಟಿದ್ದಾಳೆ. ಹೀಗಾಗಿ ಆಕೆಯಿಂದ ಬೇರೆಯಾಗಿದ್ದೇನೆ ಎಂದು ಹೇಳಿದ್ದಾರೆ.

ಪತಿ ಆಕೆಯಿಂದ ವಿಚ್ಛೇದನ ಪಡೆಯಬೇಕೆಂದು ಬಯಸಿದ್ದಾರೆ. ಆದರೆ ಮಹಿಳೆ ಹಿಂದೆ ನಡೆದುದ್ದನ್ನು ಮರೆತು ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದಾಳೆ. ನಾವು ದಂಪತಿಗೆ ಸಲಹೆ ನೀಡಿದ್ದೇವೆ ಎಂದು ಸರಸ್ವತಿ ಹೇಳಿದರು.

Comments are closed.