ಕರ್ನಾಟಕ

ತುಮಕೂರು ನಗರದಲ್ಲಿ ಕರೊನಾ ವೈರಸ್ ಶಂಕಿತ ವ್ಯಕ್ತಿ ಪತ್ತೆ

Pinterest LinkedIn Tumblr


ತುಮಕೂರು: ತುಮಕೂರು ನಗರದಲ್ಲಿ ಕರೊನಾ ವೈರಸ್ ಶಂಕಿತ ವ್ಯಕ್ತಿ ಪತ್ತೆ ಹಿನ್ನಲೆ ನಗರದ ಹನುಮಂತಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಮೇಲೆ ವೈದ್ಯರು ನಿಗಾವಹಿಸಿದ್ದಾರೆ.

ಚೀನಾದ ವುಹಾನ್ ನಗರದ 700 ಕಿ.ಮಿ ದೂರದಲ್ಲಿನ ಹ್ಯಾಂಗ್ಝೂ ನಗರದಲ್ಲಿ ವೈರಸ್ ಶಂಕಿತ ವಿದ್ಯಾರ್ಥಿ ವಾಸವಾಗಿದ್ದ. ಕಳೆದ 10 ದಿನಗಳ ಹಿಂದೆ ತುಮಕೂರಿಗೆ ವಾಪಸ್ ಆಗಿದ್ದ ಎನ್ನಲಾಗಿದೆ. ಶಂಕಿತ ಕರೊನಾ ವೈರಸ್ ಪತ್ತೆಯಾದ ವಿದ್ಯಾರ್ಥಿಯ ಮೇಲೆ ಆರೋಗ್ಯ ಇಲಾಖೆಯ ವಿಶೇಷ ವೈದ್ಯಕೀಯ ತಂಡ ತೀವ್ರ ನಿಗಾವಹಿಸಿದೆ.

ತುಮಕೂರಿಗೆ ಬಂದಾಗ ಕೆಮ್ಮಿನಿಂದ ಬಳುತ್ತಿದ್ದ ವಿದ್ಯಾರ್ಥಿಯನ್ನು ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಶಂಕಿತನ ಕಫ, ರಕ್ತ ಮಾದರಿಗಳನ್ನು ಪರೀಕ್ಷೆಗೆ ಬೆಂಗಳೂರಿಗೆ ರವಾನಿಸಿ ವೈದ್ಯರು ವರದಿಗೆ ಕಾಯುತ್ತಿದ್ದಾರೆ. ಇದೇ ವೇಳೆ ಜನರಿಗೆ ಮನೆಯಿಂದ ಹೊರಗೆ ಬರದಂತೆ , ಜನರೊಂದಿಗೆ ಬೆರೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವೈರಸ್ ಶಂಕಿತ ವಿದ್ಯಾರ್ಥಿಯನ್ನು ವೈದ್ಯರು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದಾರೆ. ವುಹಾನ್ ನಲ್ಲಿ ವೈರಸ್ ಹರಡಿದ ತಕ್ಷಣ ತುಮಕೂರಿಗೆ ವಿದ್ಯಾರ್ಥಿ ವಾಪಸ್ ಆಗಿದ್ದಾರೆ. ಚೀನಾದಲ್ಲಿ ಮೂರು ವರ್ಷದದಿಂದ ಮೆಡಿಕಲ್ ಓದುತ್ತಿರುವ ತುಮಕೂರು ಮೂಲದ ವಿದ್ಯಾರ್ಥಿ ಎನ್ನಲಾಗಿದೆ. ಎಲ್ಲಾ ಕಡೆ ಕರೊನ ರೋಗ ಕಾಣಿಸಿ ಕೊಂಡಿರುವ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚತ್ತಿದೆ.

Comments are closed.