ಕರ್ನಾಟಕ

ಸೆಕ್ಸ್‌ ನಿರಾಕರಿಸಿದ ಚಿಕ್ಕಮ್ಮನನ್ನೇ ಕೊಂದು ಮುಗಿಸಿದ ಕಾಮುಕ..!

Pinterest LinkedIn Tumblr

ಬೆಂಗಳೂರು: ಕುಡಿದು ಬಂದಾಗ ಲೈಂಗಿಕ ಕ್ರಿಯೆಗೆ ಸಹಕರಿಸದ ಚಿಕ್ಕಮ್ಮನನ್ನು ಕೊಂದಿರುವ ಘಟನೆ ಬೆಂಗಳೂರಿನ ಹೊರವಲಯ ಬನ್ನೇರುಘಟ್ಟದ ಬಳಿ ನಡೆದಿದೆ. ಕುಡಿದು ಬಂದಿದ್ದ ಕಾಮುಕ ಲೈಂಗಿಕ ಕ್ರಿಯೆಗೆ ಸಹಕರಿಸದ ಚಿಕ್ಕಮ್ಮನನ್ನು ಕೊಂದೇ ಬಿಟ್ಟಿದ್ದಾನೆ.

ಯಶೋಧ 43 ಮೃತ ದುರ್ದೈವಿ. ಫೆ.3 ರಂದು ರಾತ್ರಿ ವಿಜಯ್ ಚಿಕ್ಕಮ್ಮನ ಮನೆಗೆ ಕುಡಿದುಕೊಂಡು ಬಂದಿದ್ದ. ಚಿಕ್ಕಮ್ಮ ಯಶೋಧ ಊಟ ಮಾಡಿದ ಬಳಿಕ ನಿದ್ರೆಗೆ ಜಾರಿದ್ದರು. ಈ ವೇಳೆ ಮನೆಗೆ ಬಂದ ವಿಜಯ್ ತನ್ನ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಚಿಕ್ಕಮ್ಮನಿಗೆ ಬಲವಂತ ಮಾಡಿದ್ದಾನೆ.

ಯಶೋಧ ಒಪ್ಪದಿದ್ದಾಗ ಕೋಪಗೊಂಡ ವಿಜಯ್ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ತನ್ನ ಸ್ವಂತ ಚಿಕ್ಕಮ್ಮನನ್ನೇ ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಹೊರವಲಯ ಬನ್ನೇರುಘಟ್ಟದ ಬಳಿ ಘಟನೆ ನಡೆದಿದ್ದು, ಬನ್ಮೇರುಘಟ್ಟ ಪೊಲೀಸರು ಆರೋಪಿ ವಿಜಯ್‌ನನ್ನು ಬಂಧಿಸಿದ್ದಾರೆ.

Comments are closed.