ಕರ್ನಾಟಕ

ಯಾವ ಯುವತಿಯು ತನ್ನನ್ನು ಮದುವೆಯಾಗದ ಕಾರಣ ದುಬಾರಿ ವಾಚ್ ಖರೀದಿಗೆ ಬುರ್ಖಾ ಧರಿಸಿ ಸಿಕ್ಕಿಕೊಂಡ!

Pinterest LinkedIn Tumblr


ಧಾರವಾಡ/ಹುಬ್ಬಳ್ಳಿ: ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ಗಿಫ್ಟ್ ಗಳನ್ನ ಕೊಡೋದನ್ನ ನೀವೂ ಕೇಳಿರತೀರಿ. ಆದರೆ ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ವಾಚ್ ಖರೀದಿಸಲು ಬುರ್ಖಾ ಧರಿಸಿಕೊಂಡು ಬಂದ ವೈದ್ಯನೊಬ್ಬ ಪೊಲೀಸರ ಅತಿಥಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಶಿರಸಿ ಮೂಲದ ವೈದ್ಯ ವಸಂತರಾವ್ ಭಾನುವಾರ ಸಂಜೆ ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ ಗೆ ಬುರ್ಖಾ ಧರಿಸಿಕೊಂಡು ವಾಚ್ ಖರೀದಿಸಲು ಆಗಮಿಸಿದ್ದ. ಬುರ್ಖಾ ಧರಿಸಿಕೊಂಡು ಟೈಟಾನ್ ಕಂಪನಿಯ ವಾಚ್ ಶೋ ರೂಂನಲ್ಲಿ 20 ಸಾವಿರ ರೂಪಾಯಿಯ ಬೆಲೆ ಬಾಳುವ ವಾಚ್ ಖರೀದಿಸಲು ಮುಂದಾದ ವೇಳೆ ವೈದ್ಯನ ವರ್ತನೆಯಿಂದ ಅನುಮಾನಗೊಂಡ ಅಂಗಡಿಯವರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ವೈದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಅಲ್ಲದೇ ವೈದ್ಯನ ವರ್ತನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸಹ ನಿರ್ಮಾಣವಾದ ಘಟನೆ ನಡೆಯಿತು.

ಎಷ್ಟೆ ಪ್ರಯತ್ನ ಮಾಡಿದ್ರು ಯಾವ ಹುಡುಗಿಯೂ ವೈದ್ಯನನ್ನ ಮದುವೆಯಾಗಲು ಒಪ್ಪದ ಪರಿಣಾಮ ವೈದ್ಯ ವಸಂತರಾವ್ ಯಾರಾದ್ರು ಹುಡುಗಿಯೊಬ್ಬಳಿಗೆ ದುಬಾರಿ ಬೆಲೆಯ ವಾಚ್ ನೀಡಿ ಮನವೊಲಿಸಲು ಮುಂದಾಗಿದ್ದನಂತೆ. ಅದಕ್ಕಾಗಿಯೇ ದುಬಾರಿ ಬೆಲೆಯ ವಾಚ್ ಖರೀದಿಸಿದ್ದು ಯಾರಿಗೂ ಗೊತ್ತಾಗಬಾರದೆಂದು ಬುರ್ಖಾ ಧರಿಸಿಕೊಂಡು ಆಗಮಿಸಿದ್ದ ಅನ್ನೋ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.

ಮದುವೆಯಾಗದ ಪರಿಣಾಮ ಕಳೆದ ಹಲವಾರು ವರ್ಷಗಳಿಂದ ಮಾನಸಿಕವಾಗಿ ನೊಂದಿರುವ ವೈದ್ಯ ವಸಂತರಾವ್ ಇದೀಗ ಬುರ್ಖಾ ಧರಿಸಿಕೊಂಡು ಬಂದು ವಾಚ್ ಖರೀದಿಸಲು ಮುಂದಾದ ವೇಳೆ ಪೊಲೀಸರ ಅತಿಥಿಯಾಗಿದ್ದಾನೆ. ವೈದ್ಯನನ್ನ ತೀವ್ರ ವಿಚಾರಣೆ ನಂತರ ವಸಂತರಾವ್ ಮಾನಸಿಕವಾಗಿ ನೊಂದಿರುವ ವಿಚಾರ ತಿಳಿದ ಬಳಿಕ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೆ ಶಹರ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ವರದಿಯಾಗಿದೆ.

Comments are closed.