ಕರ್ನಾಟಕ

ಖ್ಯಾತ ಉದ್ಯಮಿಯಿಂದ ತನ್ನ ಕೈ ಕೆಳಗೆ ಕೆಲಸ ಮಾಡುವ ಸುಂದರ ಯುವತಿಯರಿಗೆ ಅಶ್ಲೀಲ

Pinterest LinkedIn Tumblr


ಬೆಂಗಳೂರು: ನಗರದ ಖ್ಯಾತ ಉದ್ಯಮಿಯೊಬ್ಬರು ತನ್ನ ಕೈ ಕೆಳಗೆ ಕೆಲಸ ಮಾಡುವ ಸುಂದರ ಯುವತಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಯುವತಿಯರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ.

ರಾತ್ರಿ ಆದರೆ ಸಾಕು, ಕೆಟ್ಟ ಪದ ಬಳಕೆ ಮಾಡಿ ಅಶ್ಲೀಲವಾಗಿ ಮೆಸೇಜ್‍ ಮಾಡುತ್ತಿದ್ದರು. ಮಾಲೀಕನೇ ಈ ರೀತಿ ಮೆಸೇಜ್ ಮಾಡುತ್ತಿದ್ದನ್ನು ನೋಡಿ ಯುವತಿಯರು ಕೂಡ ಶಾಕ್ ಆಗಿದ್ದರು. ಯಾವಾಗ ಮೆಸೇಜ್‍ಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಯಿತೋ ಯುವತಿಯರು ಬೇರೆ ದಾರಿ ಇಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದರು. ದೂರು ದಾಖಲಿಸಿಕೊಂಡ ಪೊಲೀಸರು ಉದ್ಯಮಿಯನ್ನು ಠಾಣೆಗೆ ಕರೆದಿದ್ದರು. ಪೊಲೀಸ್ ಠಾಣೆಗೆ ಬಂದ ಉದ್ಯಮಿ ಮಸೇಜ್‍ಗಳ ವಿಚಾರ ತಿಳಿದು, ಅಶ್ಲೀಲ ಮೆಸೇಜ್‍ಗಳ ಹಿಂದಿನ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದರು.

ಆಗಿದ್ದೇನು?
ಕಳೆದ 16ರಂದು ಉದ್ಯಮಿ ಹೆಬ್ಬಾಳ ಬಳಿಯ ಕೆಂಪಾಪುರ ಸಿಗ್ನಲ್ ಬಳಿ ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಮತ್ತೊಂದು ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದ್ದರು. ಕೆಳಗಿಳಿದ ಇಂಡಿಕಾ ಕಾರು ಚಾಲಕ ಏಕಾಏಕಿ ಉದ್ಯಮಿ ಬಳಿ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಕೈಯಲ್ಲಿದ್ದ ಮೊಬೈಲ್ ಕಸಿದು ಹೊರಟು ಹೋಗಿದ್ದನು. ಮೊಬೈಲ್ ತಾನೇ ಹೋದರೆ ಮತ್ತೊಂದು ಖರೀದಿಸಬಹುದು ಎಂದು ಉದ್ಯಮಿ ಕೂಡ ಸುಮ್ಮನಾಗಿದ್ದರು.

ಈ ವಿಚಾರ ತಿಳಿದ ಅಮೃತಹಳ್ಳಿ ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ವಿಚಾರಣೆ ವೇಳೆ ಚಾಲಕ ಮಿಥುನ್ ಮೆಸೇಜ್‍ಗಳ ಹಿಂದಿನ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದನು. ಉದ್ಯಮಿಯಿಂದ ಮೊಬೈಲ್ ಕಸಿದುಕೊಂಡು ಚಾಲಕ ಮನೆಗೆ ಹೋಗಿದ್ದನು. ಈ ವೇಳೆ ಆತ ಉದ್ಯಮಿಯ ಮೊಬೈಲಿನಲ್ಲಿದ್ದ ಸುಂದರ ಯುವತಿಯರ ನಂಬರ್‍ಗಳಿಗೆ ವಾಟ್ಸಪ್ ಹಾಗೂ ಟೆಕ್ಸ್ಟ್ ಮೆಸೇಜ್ ಮಾಡುವುದಕ್ಕೆ ಶುರು ಮಾಡಿದ್ದನು. ಲೈಟ್ ನೈಟ್‍ವರೆಗೂ ಅಶ್ಲೀಲವಾಗಿ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದಾಗಿ ಚಾಲಕ ಮಿಥುನ್ ತಪ್ಪೊಪ್ಪಿಕೊಂಡಿದ್ದಾನೆ.

ಇತ್ತ ಮಾಡದ ತಪ್ಪಿಗೆ ಉದ್ಯಮಿ ಪೊಲೀಸ್ ಠಾಣಾ ಮೆಟ್ಟಿಲೇರಿದರೆ, ಅತ್ತ ಕಾರು ಚಾಲಕ ಜೈಲು ಸೇರಿದ್ದಾನೆ.

Comments are closed.