ಕರ್ನಾಟಕ

ಬಿಗ್ ಬಾಸ್ ಮನೆಯಿಂದ ಹೋದ 4 ದಿನಕ್ಕೆ ನನ್ನ ಮದುವೆ ಮಾಡುತ್ತಾರೆ: ಭೂಮಿ ಶೆಟ್ಟಿ

Pinterest LinkedIn Tumblr

ಬೆಂಗಳೂರು: ನೀವೆಲ್ಲ ಹೀಗೆ ಹೇಳ್ತಾ ಇದ್ದರೆ ಬಿಗ್‍ಬಾಸ್ ಮನೆಯಿಂದ ಹೊರ ಹೋದ ನಾಲ್ಕೇ ದಿನಕ್ಕೆ ನನ್ನ ಮದುವೆ ಮಾಡಿಸ್ತಾರೆ ಎಂದು ಭೂಮಿ ಶೆಟ್ಟಿ ಹೇಳಿಕೊಂಡಿದ್ದಾರೆ.

ಬಿಗ್‍ಬಾಸ್ ಫಿನಾಲೆಗೆ ಮೂರು ದಿನಗಳು ಮಾತ್ರ ಉಳಿದಿದ್ದು, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಭೂಮಿ ಶೆಟ್ಟಿ ಸಹ ಒಬ್ಬರು. ಕೊನೆಯ ವಾರ ಆಗಿದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಟಾಸ್ಕ್ ಗಳು ಸಿಗುತ್ತಿಲ್ಲ. ಬದಲಾಗಿ ಹಳೆಯ ಸ್ಪರ್ಧಿಗಳನ್ನು ಮನೆಗೆ ಕರೆ ತರುವ ಮೂಲಕ ಫೈನಿಲಿಸ್ಟ್ ಗಳಿಗೆ ಸರ್ಪ್ರೈಸ್ ನೀಡಲಾಗುತ್ತಿದೆ. ಗೆಸ್ಟ್ ಬಂದು ಹೋದ ನಂತರ ಸ್ಪರ್ಧಿಗಳು ತಮ್ಮ ಹಳೆಯ ಮಾತುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.

ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಅಡುಗೆ ಮಾಡುತ್ತಿರುವಾಗ ಯಾರು, ಯಾರಿಗೆ ಮತ್ತು ಯಾವಾಗ ಹೇಳಿದ್ರು ಅನ್ನೋ ಟಾಸ್ಕ್ ವಾಸುಕಿ ನೀಡಿದರು. ಈ ಟಾಸ್ಕ್ ನಲ್ಲಿ ಸ್ಪರ್ಧಿಗಳ ಹಳೇ ಹೇಳಿಕೆಗಳನ್ನು ಒಬ್ಬರು ಹೇಳೋದು. ಉಳಿದವರು ಯಾರು, ಯಾರಿಗೆ ಮತ್ತು ಯಾವಾಗ ಹೇಳಿದ್ರು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅಡುಗೆ ಮಾಡುತ್ತಿದ್ದ ಶೈನ್ ಶೆಟ್ಟಿ, ನಮ್ಮ ಮನೆಯಲ್ಲಿ ಯಾರನ್ನ ತೋರಿಸ್ತಾರೋ ಅವರನ್ನೇ ಮದ್ವೆ ಆಗೋದು ಎಂದರು. ಆಗ ಎಲ್ಲರೂ ಇದು ಭೂಮಿ ಹೇಳಿದ್ದು ಅಂತಾ ಉತ್ತರಿಸಿದರು. ಇತ್ತ ಕುರಿ ಪ್ರತಾಪ್, ನಾನ್ ಇಲ್ಲಿಂದ ಆಚೆ ಹೋದ್ಮೇಲೆ ಮದ್ವೆ ಆಗ್ತೀನಿ ಎಂದು ಹೇಳಿದ್ದು ಯಾರು ಅಂದ್ರು. ಮನೆಯ ಇತರ ಸದಸ್ಯರು ಭೂಮಿ ಹೆಸರನ್ನು ಹೇಳಿದರು.

ನನಗೆ ಮದುವೆ ಮಾಡಿಕೊಳ್ಳಲು ಇಷ್ಟ. ಆದ್ರೆ ಮನೆಯಲ್ಲಿ ನಾನು ಮದುವೆ ಆಗ್ತೀನಿ ಹೇಗೆ ಹೇಳಲಿ ಎಂದು ಭೂಮಿ ಶೆಟ್ಟಿ ಶೈಲಿಯಲ್ಲಿ ಕುರಿ ಪ್ರತಾಪ್ ಹೇಳಿದರು. ಮಧ್ಯೆ ಪ್ರವೇಶಿಸಿದ ದೀಪಿಕಾ, ಅವರಿಗೆಲ್ಲ ಯಾಕೆ ಹೇಳಿದೆ. ನಮಗೆ ಹೇಳಿದ್ರೆ ನಾವ್ ಮದುವೆ ಮಾಡಿಸ್ತಾ ಇರಲಿಲ್ವಾ ಎಂದು ನಿಮ್ಮ ಪೋಷಕರು ಪ್ರಶ್ನಿಸುತ್ತಾರೆ ಅಂದರು. ಎಲ್ಲರ ಮಾತು ಕೇಳಿದ ಭೂಮಿ ಶೆಟ್ಟಿ, ನೀವೆಲ್ಲ ಹೀಗೆ ಹೇಳ್ತಾ ಇದ್ದರೆ, ಇಲ್ಲಿಂದ ಹೋದ ನಾಲ್ಕೇ ದಿನದಲ್ಲಿ ನನ್ನ ಮದುವೆ ಆಗುತ್ತೆ ಎಂದು ಎಲ್ಲರನ್ನು ಸುಮ್ಮನಾಗಿಸಿದರು.

Comments are closed.