ಕರ್ನಾಟಕ

ಮಂಡ್ಯದಲ್ಲಿ ವಿಚಿತ್ರ ಹೆಣ್ಣು ಮಗು ಜನನ

Pinterest LinkedIn Tumblr


ಮಂಡ್ಯ: ಒಣ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ವಿಚಿತ್ರ ಹೆಣ್ಣು ಮಗುವೊಂದು ನಗರದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಮಿಮ್ಸ್) ಮಂಗಳವಾರ ರಾತ್ರಿ ಜನಿಸಿದೆ.

ರಾಮನಗರ ಜಿಲ್ಲೆ ಮಲ್ಲನಕೆರೆ ಗ್ರಾಮದ ರಂಜಿತ ಮತ್ತು ನವೀನ್ ಕುಮಾರ್ ದಂಪತಿಯ ಮೊದಲ ಮಗು ಇದಾಗಿದೆ. ಗರ್ಭಿಣಿ ರಂಜಿತಾ ಅವರನ್ನು ಹೆರಿಗೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಡಾ.ಗೀತ ಅವರು ಹೆರಿಗೆ ಮಾಡಿಸಿದ ಸಂದರ್ಭದಲ್ಲಿ ಈ ವಿಚಿತ್ರ ಮಗು ಜನನವಾಗಿದೆ.

ಮಗುವಿನ ದೇಹದ ಚರ್ಮವು ತೀರ ದಪ್ಪವಾಗಿದ್ದು, ಒಣಗಿದಂತಿದೆ. ಹೀಗಾಗಿ ಅಲ್ಲಲ್ಲಿ ದೇಹದ ಮೈಮೇಲಿನ ಚರ್ಮವು ಬಿರುಕು ಬಿಟ್ಟಿದೆ. ಹೀಗಾಗಿ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿದೆ. ಸದ್ಯಕ್ಕೆ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ವಂಶಪಾರಂಪರ್ಯ ಕಾಯಿಲೆಗೆ ಒಳಗಾಗಿ ಈ ಮಗು ಜನಿಸಿದೆ ಎಬಿಸಿಎ 12 ಜೀನ್ ಮ್ಯುಟೇಶನ್ ಕಾರಣದಿಂದ ಮಗುವು ಈ ರೀತಿ ಆದ ವಿಚಿತ್ರ ಒಣಚರ್ಮ ಕಾಯಿಲೆಗೆ ಒಳಗಾಗಿದೆ. ಐದು ಲಕ್ಷದಲ್ಲಿ 1 ಮಗುವಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಎಂದು ಚರ್ಮರೋಗ ತಜ್ಞರೂ ಆದ ಮಿಮ್ಸ್ ವೈದ್ಯ ಅಧೀಕ್ಷಕ ಡಾ. ಎಂ.ಆರ್. ಹರೀಶ್ ಅವರು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು

Comments are closed.