ಕರ್ನಾಟಕ

60 ವರ್ಷ ಆಗುತ್ತಿದ್ದಂತೆ ಮನೆ ಬಾಗಿಲಿಗೆ ‘ವೃದ್ದಾಪ್ಯ ವೇತನ’ – ಆರ್​ ಅಶೋಕ್​

Pinterest LinkedIn Tumblr


ಬೆಂಗಳೂರು: ಮುಂದಿನ 15 ದಿನದಲ್ಲಿ 9 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಶೇ.50ರಷ್ಟು ಮುಗಿಸಲು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ, ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಮೊದಲ ಕಂತಿನಲ್ಲಿ ಒಂದು ಲಕ್ಷ ಬಿಡುಗಡೆ ಆಗಿದೆ. ಈಗ ಎರಡನೇ ಕಂತಿನಲ್ಲಿ 1 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದರು.

ಅಂತೆಯೇ ಮಾತನಾಡಿ, ಪ್ರವಾಹ ಪೀಡಿತ ಪ್ರದೇಶಗಳ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕ ಬಹುತೇಕ ಪೂರ್ಣಗೊಂಡಿದೆ. ಅಲ್ಲದೇ, ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಯೂ ಪೂರ್ಣಗೊಂಡಿದೆ. ಮೇ ತಿಂಗಳಲ್ಲಿ ಗಣತಿ ಆರಂಭ ಆಗುತ್ತದೆ. ಈ ಬಾರಿ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಗಣತಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿಗಳು ಹಾಗೂ ಎಸಿಗಳು ಕೇವಲ ಎಸಿ ರೂಮಲ್ಲೇ ಕೂತಿರುತ್ತಾರೆ ಎಂಬ ಆರೋಪ ಇದೆ. ಇದನ್ನು ಹೋಗಲಾಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಡಿಸಿಗಳು ಹಳ್ಳಿ ಹಳ್ಳಿಗೆ ಖುದ್ದು ತೆರಳಬೇಕು. ಗ್ರಾಮದ ಸಮಸ್ಯೆಗಳನ್ನು ಹರಿಯಬೇಕು. ಇದೇ ಮೊದಲ ಬಾರಿಗೆ ದೇಶದಲ್ಲೇ ಕಾಗದ ರಹಿತ ಜನ ಗಣತಿ ಮಾಡಲು ನಿರ್ಧಾರಿಸಲಾಗಿದೆ ಎಂದು ಸಚಿವ ಆರ್​.ಅಶೋಕ್ ಅವರು ತಿಳಿಸಿದರು.

ಇನ್ನು ವೃದ್ದಾಪ್ಯ ವೇತನಕ್ಕೆ ಹಿರಿಯರು ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. 60 ವರ್ಷ ದಾಟುತ್ತಿದ್ದಂತೆ ಕಂದಾಯ ಇಲಾಖೆಯೇ ಅವರ ಮನೆ ಬಾಗಿಲಿಗೆ ವೇತನ ಮುಟ್ಟಿಸುತ್ತೇವೆ. ಡಿಸಿ, ಎಸಿ, ತಹಶಿಲ್ದಾರ್ ಗಳು ಇನ್ನು ಮುಂದೆ ಗ್ರಾಮ ಪಂಚಾಯತಿಗೆ ಹೋಗಿ ಕೆಲಸ ಮಾಡಬೇಕು. ಬೆಳಗ್ಗೆ 10ರಿಂದ 5ರ ತನಕ ಅಲ್ಲೇ ಇರಬೇಕು. ಪ್ರತಿ ಮೂರನೇ ಶನಿವಾರ ಹೋಗಿ ಜನರ ಸಮಸ್ಯೆ ಆಲಿಸುವುದು, ಪರಿಹಾರ ನೀಡುವುದು ಮತ್ತು ಸರ್ಕಾರದ ಯೋಜನೆಗಳನ್ನು ಮುಟ್ಟಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವ ಆರ್​. ಅಶೋಕ್ ಅವರು ಹೇಳಿದರು.

Comments are closed.