ಕರ್ನಾಟಕ

ಆರ್‌ಎಸ್‌ಎಸ್‌ನವರು ಎಂದಾದರೂ ತಮ್ಮ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರಾ

Pinterest LinkedIn Tumblr


ರಟ್ಟೀಹಳ್ಳಿ (ಹಾವೇರಿ): ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ನಾವು ಹೋರಾಟ ಮಾಡುತ್ತಿಲ್ಲ. ದೇಶದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ಪಟ್ಟಣದ ಹೊರವಲಯದಲ್ಲಿಸೋಮವಾರ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ ಕಾಯಿದೆ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಇಬ್ರಾಹಿಂ ಮಾತನಾಡಿದರು

‘‘ಎನ್‌ಆರ್‌ಸಿ ಜಾರಿಗೆ ತರುವುದರಿಂದ 80 ಕೋಟಿ ಜನರಿಗೆ ತೊಂದರೆಯಾಗುತ್ತದೆ. ಇದರಲ್ಲಿಮುಸ್ಲಿಮರ ಸಂಖ್ಯೆ 4 ಕೋಟಿ ಇದ್ದರೆ, ಇತರರು 76 ಕೋಟಿ ಇದ್ದಾರೆ. ಪ್ರತಿ ಹಳ್ಳಿಗಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಬೇಕು’’ ಎಂದು ಕರೆ ನೀಡಿದರು.

‘‘ರಾಮ ಮಂದಿರ, ತ್ರಿವಳಿ ತಲಾಖ್‌ ಎಲ್ಲಮುಗಿದವು. ಈಗ ಬಿಜೆಪಿಗೆ ಯಾವುದೇ ವಿಷಯಗಳು ಉಳಿದಿಲ್ಲ. ಹಾಗಾಗಿ ಈ ಪೌರತ್ವ ಕಾಯಿದೆ ಕಾನೂನು ತರುವುದಕ್ಕೆ ಹೊರಟಿದ್ದಾರೆ. ಇಸ್ಲಾಂ ಧರ್ಮಕ್ಕೆ ವಿಪತ್ತು ಇದ್ದಿದ್ದರೆ ಹಸಿರು ಧ್ವಜ ಹಿಡಿಯುತ್ತಿದ್ದೆವು. ಆದರೆ ದೇಶಕ್ಕೆ ವಿಪತ್ತು ಬಂದಿರುವುದರಿಂದ ರಾಷ್ಟ್ರಧ್ವಜ ಹಿಡಿದಿದ್ದೇವೆ. ಆರ್‌ಎಸ್‌ಎಸ್‌ನವರು ಎಂದಾದರೂ ತಮ್ಮ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರಾ’’ ಎಂದು ಸಿಎಂ ಇಬ್ರಾಹಿಂ ಪ್ರಶ್ನೆ ಮಾಡಿದರು.

Comments are closed.