ರಾಷ್ಟ್ರೀಯ

ಆಕೆ ನಾಯಿಗೆ ಮುದ್ದಿಸುತ್ತಿದ್ದರೆ ಆತ ತನ್ನ ಪ್ಯಾಂಟ್ ಜಿಪ್ ಬಿಚ್ಚುತ್ತಿದ್ದ..!

Pinterest LinkedIn Tumblr


ಬೆಂಗಳೂರು: ಬೆಳಗಿನ ಚುಮು ಚುಮು ಚಳಿಯಲ್ಲಿ ಆಕೆ ಪಾರ್ಕ್‌ಗೆ ಬಂದಿದ್ದರು. ವಾಕ್‌ ಮಾಡುತ್ತಾ, ಎಳೆ ಬಿಸಿಲು ಕಾಯಿಸುತ್ತಾ ಕಾಲ ಕಳೆಯುತ್ತಿದ್ದರು. ಆಗ ಅಲ್ಲೊಬ್ಬ ಆಗಂತುಕ ಬಂದ..! ಆತನ ಜೊತೆಗೆ ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯೂ ಇತ್ತು. ನಾಯಿಯನ್ನು ಆಕೆ ಮುದ್ದಿಸಲಿ ಎಂಬ ಉದ್ದೇಶದಿಂದಲೇ ಆತ ಹತ್ತಿರಕ್ಕೆ ಕರೆದುಕೊಂಡು ಬಂದ. ಆ ನಾಯಿಯನ್ನು ನೋಡಿದ ಆಕೆಗೆ ಪ್ರೀತಿ ಉಕ್ಕಿ ಬಂತು. ನಾಯಿಯ ಮೈದಡವಿ ಮುದ್ದಿಸೋಕೆ ಶುರು ಮಾಡಿದ್ರು. ಆಗ ಆಕೆಗೆ ತಮ್ಮ ಜೀವನದ ಅತಿದೊಡ್ಡ ಶಾಕ್ ಎದುರಾಗಿತ್ತು..!

ಬೆಂಗಳೂರಿನ ದೊಡ್ಡನೆಕ್ಕುಂದಿ ಕೆರೆಯ ಸುತ್ತಲಿರುವ ಪಾರ್ಕ್‌ನಲ್ಲಿ ಎಂದಿನಂತೆ ಬೆಳಗಿನ ವಾಕ್‌ಗೆ ಬಂದಿದ್ದ ಶೃತಿ (ಹೆಸರು ಬದಲಿಸಲಾಗಿದೆ) ಅವರಿಗೆ ಗೋಲ್ಡನ್‌ ರಿಟ್ರೀವರ್ ತಳಿಯ ನಾಯಿಯನ್ನು ಕಂಡ ಕೂಡಲೇ ಪ್ರೀತಿ ಉಕ್ಕಿ ಬಂದಿದ್ದೇ ತಪ್ಪಾಗಿತ್ತು..! ಆಕೆ ನಾಯಿಯ ದೇಹವನ್ನು ನಯವಾಗಿ ಸವರುತ್ತಾ ಮುದ್ದಿಸಲು ಮುಂದಾದಾಗ ಆತ ‘ ಬಿ ಕೇರ್‌ಫುಲ್‌’ ಎಂದ. ನಾಯಿ ಕಚ್ಚಬಹುದೇನೋ.. ಹಾಗಾಗಿ ಈ ರೀತಿ ಎಚ್ಚರಿಕೆ ಕೊಡುತ್ತಿದ್ದಾನೆ ಎಂದುಕೊಳ್ಳುವಷ್ಟರಲ್ಲೇ, ಆತನ ಅಸಲಿ ಆಟ ಶುರುವಾಗಿತ್ತು.

ಅಕ್ಕಪಕ್ಕದಲ್ಲಿ ಜನರಿಲ್ಲ ಎಂದು ಖಾತರಿಪಡಿಸಿಕೊಂಡ ಕಾಮುಕ, ಶೃತಿ ಅವರು ನಾಯಿ ಜೊತೆ ತಲ್ಲೀನವಾಗಿರೋದನ್ನು ಗಮನಿಸಿ ನಿಧಾನವಾಗಿ ತನ್ನ ಪ್ಯಾಂಟ್‌ನ ಜಿಪ್‌ ಬಿಚ್ಚಿದ. ಶೃತಿ ಅವರ ಕೈ ಹಿಡಿದುಕೊಂಡು ತನ್ನ ಗುಪ್ತಾಂಗವನ್ನು ಮುಟ್ಟುವಂತೆ ಬಲವಂತಪಡಿಸಿದ. ತನ್ನ ಗುಪ್ತಾಂಗದ ಬಳಿ ಶೃತಿ ಅವರ ಕೈಯ್ಯನ್ನು ಬಲವಂತವಾಗಿ ಎಳೆದಾಡಿದ. ಈ ಘಟನೆ ಎಷ್ಟು ಬೇಗ ನಡೆದುಹೋಯ್ತು ಅಂದರೆ, ಶೃತಿ ಅವರು ಒಂದು ಕ್ಷಣ ದಿಕ್ಕು ತೋಚದಂತಾದರು. ಕೂಡಲೇ ಕೂಗಲು ಶುರು ಮಾಡಿದರು. ಆತ ತಪ್ಪಿಸಿಕೊಂಡು ಓಡದಂತೆ ಕಾಲರ್‌ ಹಿಡಿದುಕೊಂಡರು.

ಶೃತಿ ಅವರ ಕೂಗಾಟ ಕೇಳಿ ಸಮೀಪದಲ್ಲೇ ವಾಕಿಂಗ್ ಮಾಡ್ತಿದ್ದವರು ಹತ್ತಿರ ಬರುವ ವೇಳೆಗಾಗಲೇ ಆತ ತನ್ನ ನಾಯಿ ಜೊತೆ ಪರಾರಿಯಾಗಿದ್ದ. ಅಷ್ಟರಲ್ಲೇ ಬುದ್ದಿವಂತಿಕೆ ಉಪಯೋಗಿಸಿದ್ದ ಶೃತಿ, ತಮ್ಮ ಮೊಬೈಲ್‌ನಲ್ಲಿ ಆತನ ಫೋಟೋ ತೆಗೆದುಕೊಂಡಿದ್ದರು. ಸುಮಾರು 25 ರಿಂದ 30 ವರ್ಷ ವಯಸ್ಸಿನ ಆ ಕಾಮುಕ, ಕಪ್ಪು ಬಣ್ಣದ ಹೂಡಿ ಧರಿಸಿದ್ದ. ನೀಲಿ ಣ್ಣದ ಪ್ಯಾಂಟ್ ಧರಿಸಿದ್ದ.

ಘಟನೆ ನಡೆದ ಕೂಡಲೇ ತಡ ಮಾಡದೆ ಪೊಲೀಸ್ ಠಾಣೆಗೆ ಹೊರಟ ಶೃತಿ ಅವರು ಈ ಸಂಬಂಧ ದೂರು ದಾಖಲಿಸಿದರು. ತಾವು ತೆಗೆದಿದ್ದ ಕಾಮುಕನ ಫೋಟೋವನ್ನು ಪೊಲೀಸರಿಗೆ ಕೊಟ್ಟರು. ಈ ಸಂಬಂಧ ಎಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಈ ಘಟನೆಯನ್ನು ಫೇಸ್‌ಬುಕ್‌ನಲ್ಲೂ ಶೃತಿ ಅವರು ಶೇರ್ ಮಾಡಿಕೊಂಡಿದ್ಧಾರೆ. ಹಾಗೆ ನೋಡಿದ್ರೆ, ಇಂಥಾ ಘಟನೆಗಳು ನಡೆದಾಗ ಸಾಮಾನ್ಯವಾಗಿ ಮಹಿಳೆಯರು ಪೊಲೀಸ್ ಠಾಣೆವರೆಗೂ ಹೋಗೋದಿಲ್ಲ. ಆದರೆ, ಶೃತಿ ಅವರು ದಿಟ್ಟತನ ಮೆರೆದಿದ್ದು, ಆರೋಪಿ ಆದಷ್ಟು ಬೇಗ ಬಂಧನವಾಗುವ ನಿರೀಕ್ಷೆ ಇದೆ.

Comments are closed.