ರಾಷ್ಟ್ರೀಯ

ಮುಸ್ಲಿಂ ಲಾ ಬೋರ್ಡ್ ನಿಂದ ಬಹುಪತ್ನಿತ್ವ ನಿಖಾ ಹಲಾಲ್ ನಿಷೇಧದ PIL ವಿರುದ್ಧ ಸುಪ್ರೀಂಗೆ ಮೇಲ್ಮನವಿ

Pinterest LinkedIn Tumblr


ನವದೆಹಲಿ: ಇಸ್ಲಾಂನಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ್ ಅನ್ನು ನಿಷೇಧಿಸಿಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಅರ್ಜಿ ವಿರುದ್ಧ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಬಹುಪತ್ನಿತ್ವ ಹಾಗೂ ಇತರ ಪದ್ಧತಿ ಬಗ್ಗೆ ಈಗಾಗಲೇ ಹಿಂದಿನ ತೀರ್ಪಿನಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರು ಧಾರ್ಮಿಕ ಸಂಪ್ರದಾಯ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಮುಸ್ಲಿಂ ಮಂಡಳಿ ಮೇಲ್ಮನವಿಯಲ್ಲಿ ತಿಳಿಸಿದೆ.

ಮುಸ್ಲಿಂ ಮಂಡಳಿ ಮತ್ತು ಇತರ ಸಂಘಟನೆಗಳು ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಈಗಾಗಲೇ ಕಾರ್ಯನಿರ್ವಹಿಸಿದೆ. ಇದೀಗ ವಕೀಲ, ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಅವರು ಇಸ್ಲಾಂನ ಬಹುಪತ್ನಿತ್ವ ಮತ್ತು ನಿಖಾ ಹಲಾಲ್ ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಬಹುಪತ್ನಿತ್ವ ಪದ್ಧತಿ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದಲು ಅನುವು ಮಾಡಿಕೊಡುತ್ತದೆ ಎಂದು ಮುಸ್ಲಿಂ ಮಂಡಳಿ ಹೇಳಿದೆ.

ಏನಿದು ನಿಖಾ ಹಲಾಲ್:

ಇದು ಇಸ್ಲಾಂ ಅನುಸರಿಸುವ ಪದ್ಧತಿಯಾಗಿದೆ. ನಿಖಾ ಹಲಾಲ್ ಪ್ರಕಾರ ಒಬ್ಬ ಮುಸ್ಲಿಂ ಮಹಿಳೆ ಪತಿಯಿಂದ ತ್ರಿವಳಿ ತಲಾಖ್ ಪಡೆದ ನಂತರ ಮತ್ತೆ ಗಂಡನ ಜತೆ ಮರುವಿವಾಹವಾಗುವ ಮುನ್ನ ಆಕೆ ಮತ್ತೊಬ್ಬ ವ್ಯಕ್ತಿ ಜತೆ ವಿವಾಹವಾಗಿ ಆತನಿಗೆ ವಿಚ್ಛೇದನ ನೀಡಿದ ನಂತರ ಮೊದಲ ಪತಿ ಜತೆ ವಿವಾಹವಾಗಬಹುದು. ಇದೇ ನಿಖಾ ಹಲಾಲ್.

Comments are closed.