ಕರ್ನಾಟಕ

ಸಾರ್ವಜನಿಕ ಸ್ಥಳದಲ್ಲಿ ಅಪ್ಪಿಕೊಂಡು ಕಿಸ್ ಮಾಡುವ ಪ್ರೇಮಿಗಳು!

Pinterest LinkedIn Tumblr


ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಹೋಗುವ ಕೆಲ ಪ್ರೇಮಿಗಳು, ಮನಸ್ಸೊಇಚ್ಛೆ ಅಶ್ಲೀಲ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡುಗುತ್ತಾರೆ ಎಂದು ಸರ್ಕಾರ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದೆ. ಆದರೂ ಕ್ಯಾಮೆರಾಗಳಿವೆ ಎಂಬ ಪರಿಜ್ಞಾನವಿಲ್ಲದ ಕೆಲ ಜೋಡಿಗಳು ಸಾರ್ವಜನಿಕರ ಸಮ್ಮುಖದಲ್ಲೇ ರೊಮ್ಯಾನ್ಸ್‌ನಲ್ಲಿ ತೊಡಗುವುದರ ಮೂಲಕ ಪ್ರವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಪ್ರೇಮಿಗಳು ಸಾರ್ವಜನಿಕ ಸ್ಥಳದಲ್ಲಿಯೇ ಅಶ್ಲೀಲವಾಗಿ ವರ್ತಿಸುತಿದ್ದಾರೆ. ನೂರಾರು ಎಕರೆ ವಿಶಾಲವಾಗಿ ಹರಡಿರುವ ನಂದಿಗಿರಿಧಾಮದಲ್ಲಿ ಹಿಂದೊಮ್ಮೆ ಅಶ್ಲೀಲ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದ ಕಾರಣ ರಾಜ್ಯ ತೋಟಗಾರಿಕೆ ಇಲಾಖೆ ಗಿರಿಧಾಮದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದೆ.

ಕೆಲವು ಜೋಡಿಗಳು ಈಗಲೂ ಸಹ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಸಾರ್ವಜನಿಕವಾಗಿಯೇ ಒಬ್ಬರಿಗೊಬ್ಬರು ಕೀಸ್ ಮಾಡ್ತಾ, ತಬ್ಬಿಕೊಂಡು ಮುದ್ದು ಮಾಡುತ್ತಾ, ರೊಮ್ಯಾನ್ಸ್ ಮಾಡುವ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ನಂದಿಗಿರಿಧಾಮದ ಅಧಿಕಾರಿ ರವಿಕುಮಾರ್ ಬೇಸರದಿಂದ ಹೇಳಿದ್ದಾರೆ.

ಸಿಸಿಟಿವಿ ಭಯದಿಂದ ನಂದಿಗಿರಿಧಾಮಕ್ಕೆ ಬರೋ ಕೆಲ ಜೋಡಿಗಳು ಗಿರಿಧಾಮದಲ್ಲಿನ ಪೊದೆಗಳ ಮರೆಗೆ ಹೋಗಿ ರೊಮ್ಯಾನ್ಸ್‌ನಲ್ಲಿ ತೊಡಗುತ್ತಾರೆ. ಹೀಗಾಗಿ ಎಚ್ಚೆತ್ತ ತೋಟಗಾರಿಕೆ ಇಲಾಖೆ ಈ ಹಿಂದೆ ಬೆಟ್ಟದ ಮೇಲಿರುವ ದಟ್ಟವಾದ ಪೊದೆಗಳನ್ನು ಸಹ ಕಟಾವು ಮಾಡಿಸಿದೆ. ಆದರೂ ಪ್ರೇಮಿಗಳ ಈ ತುಂಟಾಟ ಮಾತ್ರ ನಿಲ್ಲುತ್ತಿಲ್ಲ. ಒಂದೆಡೆ ಪ್ರಕೃತಿ ಸೊಬಗು ಸವಿಯೋಣ ಎಂದು ಬರುವ ಪ್ರವಾಸಿಗರು, ಮತ್ತೊಂದೆಡೆ ಬೆಟ್ಟದ ಮೇಲೆ ಇರೋ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಇದು ಇರುಸು ಮುರುಸು ಉಂಟುಮಾಡುತ್ತಿದೆ ಎಂದು ಪ್ರವಾಸಿಗ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ಪ್ರೇಮಿಗಳ ತಾಣ ನಂದಿಗಿರಿಧಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಸಕಾಲಕ್ಕೆ ಕ್ಯಾಮೆರಾಗಳ ಮಾನಿಟರಿಂಗ್ ವ್ಯವಸ್ಥೆ ಇಲ್ಲದೆ ಇಲ್ಲದಿರುವುದರಿಂದ ಬೆಟ್ಟದಲ್ಲಿ ಕೆಲವು ಪ್ರೇಮಿ ಜೋಡಿಗಳು ಆಡಿದ್ದೆ ಆಟ, ಮಾಡಿದ್ದೆ ಕಾಯಕವಾಗಿದೆ. ಇನ್ನೂ ಮುಂದಾದರು ಗಿರಿಧಾಮದ ವಿಶೇಷಾಧಿಕಾರಿಗಳು ನಂದಿಬೆಟ್ಟದಲ್ಲಿ ಅಶ್ಲೀಲ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

Comments are closed.