ರಾಷ್ಟ್ರೀಯ

71ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿ ಮೋದಿ ಟ್ವೀಟ್

Pinterest LinkedIn Tumblr


ನವದೆಹಲಿ: ಇಂದು ಭಾರತದಾದ್ಯಂತ 71ನೇ ಗಣರಾಜ್ಯೋತ್ಸವದ ಸಂಭ್ರಮ. ರಾಜ್ ಪಥ್ ನಲ್ಲಿ ನಡೆಯಲಿರುವ ಪರೇಡ್‌ ಇಂದಿನ ಪ್ರಮುಖ ಆಕರ್ಷಣೆಯಾಗಿರಲಿದ್ದು ಬೆಳಗ್ಗೆ 9 ರಿಂದ 11:30 ರವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ದೇಶದ ರಕ್ಷಣಾ ಪಡೆಗಳ ಶಕ್ತಿ, ಸಾಮರ್ಥ್ಯಗಳ ಪ್ರದರ್ಶನ, ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಅನಾವರಣಕ್ಕೆ 71ನೇ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ.

ಭಾರೀ ಭದ್ರತೆಯೊಂದಿಗೆ ನಡೆಯಲಿರುವ 90 ನಿಮಿಷಗಳ ಸಂಭ್ರಮದ ಕಾರ್ಯಕ್ರಮ ಕಣ್ತುಂಬಿ ಕೊಳ್ಳಲು ಬ್ರೆಜಿಲ್‌ ಅಧ್ಯಕ್ಷ ಜೈರ್‌ ಮೆಸ್ಸಿಯಾಸ್‌ ಬೋಲ್ಸೊನಾರೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪೊಲೀಸರು ಮತ್ತು ಅರೆಸೇನಾ ಪಡೆ ಯೋಧರು ಸೇರಿ 10 ಸಾವಿರ ಸಿಬ್ಬಂದಿಯ ಹದ್ದಿನ ಕಣ್ಣಿನ ಭದ್ರತೆ ಕಾರ್ಯಕ್ರಮಕ್ಕೆ ಇರಲಿದೆ.

ಈ ವೇಳೆ ಪ್ರಧಾನಿ ಮೋದಿ ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.ಈ ವೇಳೆ ಪ್ರಧಾನಿ ಮೋದಿ ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಗಣರಾಜ್ಯೋತ್ಸವವು ಸ್ವಾತಂತ್ರ್ಯ, ಸಮಾನತೆ, ಸಾರ್ವಭೌಮತೆ, ಮತ್ತು ಭಾತೃತ್ವದ ಕಲ್ಪನೆಗಳನ್ನು ಪುನರುಚ್ಚರಿಸುವ ಹಬ್ಬವಾಗಿದೆ, ಇದು ಭಾರತ ಮತ್ತು ಭಾರತೀಯನೆಂಬ ಸ್ಪೂರ್ತಿಯನ್ನು ಆಚರಿಸುವ ಒಂದು ಸುಸಂದರ್ಭವಾಗಿದೆ ಎಂದು ತಿಳಿಸಿದ್ದಾರೆ.

ಇಂದಿನ ಕಾರ್ಯಕ್ರಮದಲ್ಲಿ 16 ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಆರು ಸಚಿವಾಲಯ ಗಳು ಮತ್ತು ಇಲಾಖೆಗಳು ರೂಪಿಸಿರುವ ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳ್ಳಲಿದೆ. ಇದೇ ವೇಳೆ ಕರ್ನಾಟಕದ 7 ವಿದ್ಯಾರ್ಥಿಗಳು ಸೇರಿದಂತೆ ಸಿಬಿಎಸ್‌ಇ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಅಗ್ರ ಶ್ರೇಯಾಂಕ ಪಡೆದ ದೇಶದ ವಿವಿಧ ರಾಜ್ಯಗಳ 105 ಮಂದಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕುಳಿತು ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲಿದ್ದಾರೆ.

Comments are closed.