ಕರ್ನಾಟಕ

ಕಂದಾಯ ಜಮೀನಿನಲ್ಲಿರುವ ಅಕ್ರಮ ಮನೆಗಳ ಸಕ್ರಮ, ಶ್ಮಶಾನಕ್ಕೆ 5 ಎಕರೆ ಜಮೀನು

Pinterest LinkedIn Tumblr


ಬೆಂಗಳೂರು: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ. 2012ರ ಜ.1ಕ್ಕಿಂತ ಮುನ್ನ ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡ ಬಡವರ ಮನೆಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌. ಅಶೋಕ್‌, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅನ್ವಯ ನಗರ ಪ್ರದೇಶಗಳಲ್ಲಿ 94ಸಿ, ಗ್ರಾಮೀಣ ಪ್ರದೇಶಗಳಲ್ಲಿ 94ಸಿಸಿ ಕಲಂಗಳನ್ನು ತಿದ್ದುಪಡಿ ಮಾಡ ಲಾಗಿದೆ ಎಂದಿದ್ದಾರೆ. ಇದರನ್ವಯ ಕಂದಾಯ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಬಡವರ ಮನೆಗಳನ್ನು ಸಕ್ರಮ ಗೊಳಿಸಲಾಗುವುದು. 20ಗಿ30 ಮತ್ತು 30ಗಿ40 ಅಡಿ ಅಳತೆಯ ಮನೆಗಳಿಗೆ ಮಾತ್ರ ಇದು ಅನ್ವಯ ವಾಗಲಿದ್ದು, ರಾಜ್ಯಾದ್ಯಂತ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಫ‌ಲಾನುಭವಿಗಳ ಗುರುತು
ಅರ್ಹ ಫ‌ಲಾನುಭವಿಗಳನ್ನು ಗುರುತಿಸಲು ಮತದಾರರ ಗುರುತಿನ ಚೀಟಿ, ಬಿಪಿಎಲ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಮನೆಗಳಿಗೆ ಪಡೆದಿರುವ ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ಮುಂತಾದ ದಾಖಲೆಗಳನ್ನು ಈಗಾಗಲೇ ಪರಿಶೀಲಿಸಿ, ಅರ್ಹರನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಅಶೋಕ್‌ ಹೇಳಿದ್ದಾರೆ.

ಶ್ಮಶಾನಕ್ಕೆ ಜಮೀನು: ಸೂಚನೆ
ರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಗೆ ಕಂದಾಯ ಇಲಾಖೆಯ ಮೂಲಕ ಕನಿಷ್ಠ 5 ಎಕರೆ ಕಂದಾಯ ಜಮೀನು ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಹಳ್ಳಿಗೂ ಶ್ಮಶಾನ ಜಮೀನು ನೀಡಬೇಕು. ಕಂದಾಯ ಇಲಾಖೆ ಜಮೀನು ಇಲ್ಲದಿದ್ದರೂ ಇಲಾಖೆ ಮೂಲಕ ಖಾಸಗಿ ಜಮೀನು ಖರೀದಿಸಿ ಶ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲಾ ಕಟ್ಟಡ, ವಸತಿ ನಿಲಯ, ಅಂಗನವಾಡಿ, ಶ್ಮಶಾನ ಸಹಿತ ಇತರ ಸಾರ್ವಜನಿಕರ ಉಪಯೋಗಕ್ಕೆ 1,190 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಸಚಿವ ಅಶೋಕ್‌ ಹೇಳಿದರು.

Comments are closed.