
ತುಮಕೂರು: 2019, ಡಿಸೆಂಬರ್ 30ರಂದು ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಅವರೇಹಳ್ಳಿಯಲ್ಲಿ ಸಿಕ್ಕಿದ್ದ ಅಪರಿಚಿತ ಮಹಿಳೆಯ ಶವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಮೃತ ಮಹಿಳೆಯನ್ನು ತುಮಕೂರು ನಗರದ ಜಯನಗರ ಬಡಾವಣೆಯ ಮಧುಕುಮಾರಿ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಮೊಹಮದ್ ರೆಹಮಾನ್ ಕೊಲೆ ಮಾಡಿದ್ದಾನೆ.
ತುಮಕೂರು ನಗರದ ಮಂಜುನಾಥ್ ನಗರದ ರೆಹಮಾನ್ ಜೊತೆ ಜಯನಗರ ಬಡಾವಣೆಯ ಮಧುಕುಮಾರಿಗೂ ದೈಹಿಕ ಸಂಪರ್ಕ ಇತ್ತು. ಈ ವೇಳೆ ಮಧುಕುಮಾರಿ ಆರೋಪಿ ರೆಹಮಾನ್ ಬಳಿ 4 ಲಕ್ಷ ರೂ ಸಾಲ ಪಡೆದಿದ್ದಳು ಎನ್ನಲಾಗಿದೆ. ಸಾಲ ವಾಪಸ್ ಕೇಳಿದಾಗ ರೇಪ್ ಕೇಸ್ ಹಾಕಿ ಜೈಲಿಗೆ ಕಳಿಸೋದಾಗಿ ಮಧುಕುಮಾರಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆಕ್ರೋಶಗೊಂಡ ಮೊಹಮದ್ ರೆಹಮಾನ್ ಉಪಾಯ ಮಾಡಿ ಮಧುಕುಮಾರಿಯನ್ನ ಕೊಲೆ ಮಾಡಿದ್ದಾನೆ.
ಡಿಸೆಂಬರ್ 25ರ ಸಂಜೆ ವೇಳೆ ಮಧುಕುಮಾರಿಯನ್ನ ರೌಂಡ್ಸ್ ಕರೆದುಕೊಂಡು ಹೋಗಿದ್ದಾನೆ. ಸಿ.ಎಸ್.ಪುರದ ಅವರೇಹಳ್ಳಿ ಬಳಿ ಕಾರು ನಿಲ್ಲಿಸಿ ಹತ್ಯೆ ಮಾಡಿದ್ದಾನೆ. ಮಧುಕುಮಾರಿಯ ವೇಲ್ ನಿಂದ ಉಸಿರುಗಟ್ಟಿಸಿ ಸಾಯಿಸಿ ನಾಲೆಯಲ್ಲಿ ಶವ ಹಾಕಿ ಪರರಾರಿಯಾಗಿದ್ದ. ಜಯನಗರ ಪೊಲೀಸರ ಸುಳಿವಿನ ಮೂಲಕ ಸಿಎಸ್ ಪುರ ಪೊಲೀಸರು ಆರೋಪಿ ಮೊಹಮ್ಮದ್ ರೆಹಮಾನ್ ನ ಹೆಡೆಮುರಿಕಟ್ಟಿದ್ದಾರೆ.
Comments are closed.