ಕರ್ನಾಟಕ

ಹೊಸ ವರ್ಷಾಚರಣೆ ಸಂದರ್ಭ ತುಂಡುಡುಗೆ, ಗುಂಡು ಹಾಕಿದ್ರೆ ಹುಷಾರ್!

Pinterest LinkedIn Tumblr


ಕೊಪ್ಪಳ: ವಿದೇಶಿಗರ ಪಾಲಿಗೆ ಅದೊಂದು ಸ್ಥಳ ಸ್ವರ್ಗ ಅಂತಾನೇ ಫೇಮಸ್ ಆಗಿದೆ. ಈ ಕಾರಣಕ್ಕಾಗಿಯೇ ಸಾವಿರಾರು ವಿದೇಶಿಗರು, ಆ ಸ್ಥಳದಲ್ಲಿ ತಿಂಗಳುಗಟ್ಟಲೆ ಇದ್ದು, ಭಾರತೀಯ ಸಂಸ್ಕೃತಿಯನ್ನು ಕಣ್ಣುತುಂಬಿಕೊಳ್ತಾರೆ..

ಇನ್ನೂ ವಿದೇಶಿಗರಿಗಂತಾನೇ ಆ ಪ್ರದೇಶದಲ್ಲಿ ಸಾಕಷ್ಟು ರೇಸಾರ್ಟಗಳು ತಲೆ ಎತ್ತಿವೆ. ನ್ಯೂ ಇಯರ್ ಸಂದರ್ಭದಲ್ಲಿ, ವಿದೇಶಿಗರ ಹಾಗೂ ರೇಸಾರ್ಟ ಮಾಲಿಕರ ಹುಚ್ಚಾಟ ಹೆಚ್ಚಾಗಿರುತ್ತೆ. ಇದಕ್ಕಾಗಿಯೇ ಆ ಜಿಲ್ಲೆಯ ಪೊಲೀಸರು, ರೇಸಾರ್ಟ್ ಮಾಲಿಕರ ಹುಚ್ಚಾಟಕ್ಕೆ ಬ್ರೇಕ್ ನೀಡಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ.

ಹೌದು.. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡಿ ವಿದೇಶಿಗರ ಪಾಲಿಗೆ ಸ್ವರ್ಗ ಅಂತಾನೇ ಫೇಮಸ್.. ಬಹುತೇಕವಾಗಿ ಈ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ದ ಹಂಪಿ, ಕೊಪ್ಪಳ ಜಿಲ್ಲೆಯ ಆಂಜನಾದ್ರಿ ಪರ್ವತ, ಋಷಿಮುಖ ಪರ್ವತ, ಆನೆಗೊಂದಿ ಸೇರಿದಂತೆ ತುಂಗಾಭದ್ರ ನದಿಯೂ ಇಲ್ಲಿ ಹರಿಯುತ್ತೆ.. ಇನ್ನೂ ವಿಶೇಷವೆಂದ್ರೆ, ವಿದೇಶಿಗರಿಗೆ ಹೇಳಿಮಾಡಿದ ನೈಸರ್ಗಿಕ ಸ್ಥಳಗಳು ಇಲ್ಲೇ ಇದ್ದು, ಸಾವಿರಾರು ವಿದೇಶಿಗರು ವಿರುಪಾಪುರ ಗಡ್ಡಿಯಲ್ಲಿ ತಿಂಗಳುಗಟ್ಟಲೆ ಇಲ್ಲೇ ವಾಸ್ತವ್ಯ ಮಾಡ್ತಾರೆ.. ಇದನ್ನೆ ಬಂಡವಾಳ ಮಾಡಿಕೊಂಡ ರೆಸಾರ್ಟ್ ಮಾಲಿಕರು ಇದೇ ಸ್ಥಳದಲ್ಲಿ ಹತ್ತಾರು ರೇಸಾರ್ಟಗಳನ್ನು ಓಪನ್ ಮಾಡಿದ್ದಾರೆ.

ಇದು ಅಲ್ಲದೇ ಹೊಸ ವರ್ಷದ ಸಂದರ್ಭದಲ್ಲಿ ಮಧ್ಯರಾತ್ರಿ ವಿದೇಶಿಗರನ್ನು ಸಂತೃಪ್ತಿ ಪಡಿಸಲು ಹೆಚ್ಚಿನ ಹಣ ಪಡೆದು ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಅರೆಬೆತ್ತಲೆ ನೃತ್ಯವನ್ನು ಏರ್ಪಡಿಸ್ತಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದ್ರಿಂದ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿಯ ಪೊಲೀಸರು ಎಚ್ಚೆತ್ತುಕೊಂಡಿದ್ದು ಸಿಪಿಐ ಸುರೇಶ್ ತಳವಾರ, ರೇಸಾರ್ಟ್ ಮಾಲಿಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ನೂ ಕೆಲವೊಂದು ರೆಸಾರ್ಟ್ಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆಯಂತೆ.. ವಿದೇಶಿಗರ ಹತ್ತಿರ ದುಪ್ಪಟ್ಟು ಹಣ ಪಡೆದು ರೆಸಾರ್ಟ್ ಮಾಲಿಕರು ಮಾದಕ ವಸ್ತುಗಳನ್ನು ಪೂರೈಕೆ ಮಾಡ್ತಾ ಇದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.. ಇದ್ರಿಂದ ಗರಂ ಆಗಿರೋ ಕೊಪ್ಪಳದ ಗಂಗಾವತಿ ಉಪವಿಭಾಗದ ಪೊಲೀಸರು ರೆಸಾರ್ಟ್ರ ಮಾಲಕರ ಸಭೆ ಕರೆದು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ವೇಳೆ ಭಾರತೀಯ ಸಂಸ್ಕೃತಿಗೆ ದಕ್ಕೆ ಹಾಗೋ ರೀತಿ ಹೊಸವರ್ಷ ಆಚರಣೆ ಮಾಡಿದ್ರೆ, ಮುಲಾಜಿಲ್ಲದೇ ಕೇಸ್ ಹಾಕ್ತೀವಿ ಎಂದು ಗಂಗಾವತಿ ಡಿವೈಎಸ್‌ಪಿಬಿ.ಪಿ ಚಂದ್ರಶೇಖರ್, ರೇಸಾರ್ಟ್ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಿರುಪಾಪುರಗಡ್ಡಿ ಮಿನಿ ಗೋವಾ ಅಂತಾನೇ ಫೇಮಸ್ ಆಗಿದ್ದು, ರೆಸಾರ್ಟ್ ಮಾಲಿಕರ ಹುಚ್ಚಾಟ ಜಾಸ್ತಿ ಆಗಿತ್ತು.. ಇದೀಗ ಪೊಲೀಸರು ಎಚ್ಚೆತ್ತುಕೊಂಡು ಸರಿಯಾಗಿಯೇ ಚಾಟಿ ಬೀಸಿದ್ದಾರೆ.. ಈಗಲಾದ್ರೂ ಹೊಸ ವರ್ಷದಂದು ರೆಸಾರ್ಟನವರು ಹುಚ್ಚಾಟ ಪ್ರದರ್ಶಿಸದೇ ಭಾರತೀಯ ಸಂಸ್ಕೃತಿ ಉಳಿಸಬೇಕಾಗಿದೆ.

Comments are closed.