ರಾಷ್ಟ್ರೀಯ

ಈ ಕುರಿ ಕುರಿತು ಫೇಸ್​ಬುಕ್​ ಬಳಕೆದಾರರು ಹೇಳಿದ್ದೇನು…?

Pinterest LinkedIn Tumblr


ಇಲ್ಲೊಂದು ಫೊಟೋ ಫೇಸ್​ಬುಕ್​ನಲ್ಲಿ ಗಮನ ಸೆಳೆಯುತ್ತಿದ್ದು, ಅಪಾರ ಪ್ರಶಂಸೆಗೂ ಪಾತ್ರವಾಗಿದೆ.

ಕುರಿಯೊಂದು ಬ್ರಾ ಧರಿಸಿರುವುದು! ಆಶ್ಚರ್ಯವೇ.. ಅದಕ್ಕೊಂದು ಕಾರಣವಿದೆ. ಈ ಕುರಿಯ ಹೆಸರು ರೋಸ್​. ಇದು ಇತ್ತೀಚೆಗಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತು. ಆಗಿನಿಂದ ಈ ಬ್ರಾ ಧರಿಸಲು ಆರಂಭಿಸಿದೆ!

ರೋಸ್​ ಧರಿಸಿದ ಬ್ರಾ ಕೆಲವರನ್ನು ಚಕಿತಗೊಳಿಸಿದರೆ, ಇನ್ನು ಕೆಲವರಿಗೆ ವಿನೋದ ಎನಿಸಿದೆ. ಏನೇ ಆದರೂ ಈ ಫೊಟೋ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ.

ನ್ಯೂಜಿಲ್ಯಾಂಡ್​ನ ಫ್ರಾಂಕ್ಲಿನ್​ ವೆಟ್ಸ್​ ಲೈಫ್​ಸ್ಟೈಲ್​ ಫಾರ್ಮ್​ ಈ ಫೊಟೋ ಹಂಚಿಕೊಂಡಿದೆ. ಇದರಲ್ಲಿ, ಈ ಕುರಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಆದ್ದರಿಂದ ​ಇದರ ಕೆಚ್ಚಲು ಭಾರವಾಗಿದ್ದು ಜೋತು ಬಿದ್ದಿದ್ದವು. ಇದರಿಂದ ನೆಲಕ್ಕೆ ತಾಗಿ ಹಾನಿಯಾಗುವ ಸಂಭವವಿತ್ತು. ಹಾಗಾಗಿ ಅದಕ್ಕೆ ಬ್ರಾ ತೊಡಿಸಲಾಗಿದೆ.

ಮುಂದೆ ಕೆಚ್ಚಲು ಸಾಮಾನ್ಯ ಗಾತ್ರಕ್ಕೆ ಬರುವವರಿಗೆ ಇದನ್ನು ಮುಂದುವರಿಸಲಾಗುತ್ತದೆ. ಆದರಿಂದ ಶಸ್ತ್ರಚಿಕಿತ್ಸೆ ಮಾಡಿ ಕೆಚ್ಚಲನ್ನು ತೆಗೆಯುವ ಭಯವಿಲ್ಲ. ಇದರಿಂದ ಕುರಿಗೆ ಆರಾಮಾಗಿದೆ ಮತ್ತು ಸಂತಸವಾಗಿದೆ ಎಂದು ಬರೆಯಲಾಗಿದೆ.

ಇದಕ್ಕೆ ಫೇಸ್​ಬುಕ್​ ಬಳಕೆದಾರರು ವಿವಿಧ ರೀತಿ ಕಮೆಂಟುಗಳನ್ನು ಹಾಕಿದ್ದಾರೆ. ಲಕ್ಕಿ ರೋಸ್​, ಅದಕ್ಕೆ ಒಳ್ಳೆಯ ಓನರ್​ ದೊರೆತಿದ್ದಾರೆ ಎಂಬುದು ಒಬ್ಬರ ಅಭಿಪ್ರಾಯವಾದರೆ, ಇನ್ನೊಬ್ಬರು ಇದು ಒಳ್ಳೆಯ ಆಲೋಚನೆ ಎಂದಿದ್ದಾರೆ.

​ಅಂದಹಾಗೆ ಈ ಐಡಿಯಾಕ್ಕೆ ನೀವೇನು ಹೇಳುತ್ತೀರಿ..?

Comments are closed.