ಕರ್ನಾಟಕ

ಡೆತ್​ ನೋಟ್​ನಲ್ಲಿ ನಾನು ಸತ್ತ ಮೇಲೆ ಮನೆಯವರಿಗೆ ಬಾದಾಮಿ ಹಾಲು ಕುಡಿಸಿ ಎಂದು ಬರೆದಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Pinterest LinkedIn Tumblr


ವಿಜಯಪುರ: ನಾನು ಸತ್ತ ಮೇಲೆ ಮನೆಯವರಿಗೆ ಬಾದಾಮಿ ಹಾಲು ಕುಡಿಸಿ ಎಂದು ವಿಚಿತ್ರವಾಗಿ ಡೆತ್​ ನೋಟ್​ ಬರೆದು ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯಪುರ ನಗರದ ಇಬ್ರಾಹಿಂಪುರ ರೇಲ್ವೆ ನಿಲ್ದಾಣದದಲ್ಲಿ ವಿಶ್ವನಾಥ ಗಂಜ್ಯಾಳ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ವಿಳಾಸ ಪತ್ತೆಯಾಗಿಲ್ಲ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

ಡೆತ್​ ನೋಟ್​ನಲ್ಲಿ ಕೊನೆ ಆಸೆ: ನಾನು ಸತ್ತ ಮೇಲೆ ತಾಯಿ, ಅಕ್ಕ, ತಮ್ಮ, ಅಳಿಯನಿಗೆ ಬಾದಾಮಿ ಹಾಲು ಕುಡಿಸಿ.
ಅಲ್ಲದೆ ನಾನು ಸತ್ತ ಸುದ್ದಿ ತಿಳಿದು ಮನೆಗೆ ಮಾತನಾಡಿಸಲು ಬರುವ ಸಂಬಂಧಿಕರಿಗೂ ಬಾದಾಮಿ ಹಾಲು ಕುಡಿಸಿ. ಇದು ನನ್ನ ಕೊನೆ ಆಸೆ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ.

ಪತ್ರ ನೋಡಿ ಮನೆಯವರ ಕಿರುಕುಳದಿಂದ ವಿಶ್ವನಾಥ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ರೈಲ್ವೇ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೂರು ದಾಖಲಿಸಿರುವ ವಿಜಯಪುರ ರೇಲ್ವೆ ಪೊಲೀಸರು ವಿಶ್ವನಾಥನ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.

Comments are closed.