ಮನೋರಂಜನೆ

ನಿಂತ ಜಡೆ ಜಗಳ– ಸಂಜನಾ, ವಂದನಾ ಫುಲ್ ಸೈಲೆಂಟ್

Pinterest LinkedIn Tumblr


ಬೆಂಗಳೂರು: ನಟಿ ಸಂಜನಾ ಮತ್ತು ನಿರ್ಮಾಪಕಿ ವಂದನಾ ಇಬ್ಬರು ಕೂಡ ಪಬ್ ಒಂದರಲ್ಲಿ ಕುಡಿದು ಪರಸ್ಪರ ಕಿತ್ತಾಡಿಕೊಂಡಿದ್ದರು. ಒಬ್ಬರ ನಡೆತೆ ಮೇಲೆ ಮತ್ತೊಬ್ಬರು ಆರೋಪವನ್ನು ಮಾಡಿಕೊಂಡಿದ್ದರು. ಆದರೆ ಈಗ ಆ ಜಗಳಕ್ಕೆ ಇಬ್ಬರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

ಯುಬಿ ಸಿಟಿ ಬಳಿಯ ಪಬ್ ಒಂದರಲ್ಲಿ ಸ್ಯಾಂಡಲ್‍ವುಡ್ ನಟಿ ಸಂಜನಾ, ನಿರ್ಮಾಪಕಿ ವಂದನಾ ಮೇಲೆ ವಿಸ್ಕಿ ಗ್ಲಾಸ್ ಅನ್ನು ಬಿಸಾಡಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಸಂಜನಾ ಕೂಡ ವಂದನಾ ಮೇಲೆ ದೂರು ನೀಡಿದ್ದರು. ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

ಇಬ್ಬರು ಜಿದ್ದಿಗೆ ನಿಂತವರಂತೆ ಇದ್ದರೂ ಕೊನೆಗೆ ಪ್ರಕರಣದಿಂದ ಇಬ್ಬರೂ ಹಿಂದೆ ಸರಿಯುತ್ತಿದ್ದಾರೆ. ಸಂಜನಾ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ನಾನು ಪ್ರಕರಣಕ್ಕೆ ಇತ್ಯರ್ಥ ಹಾಡುತ್ತೇನೆ ಎಂದಿದ್ದರು. ಬಳಿಕ ವಂದನಾ ಕೂಡ ಸುದ್ದಿಗೋಷ್ಟಿ ನಡೆಸುತ್ತೇನೆ. ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿ ಈಗ ಸೈಲೆಂಟ್ ಆಗಿದ್ದಾರೆ.

ಇಬ್ಬರೂ ಬಾಟಲಿಯಲ್ಲಿ ಬಡಿದಾಡಿಕೊಂಡು ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಸದ್ಯಕ್ಕೆ ಜಡೆ ಜಗಳಕ್ಕೆ ಬ್ರೇಕ್ ಬಿದ್ದಿದೆ.

Comments are closed.