ಕರ್ನಾಟಕ

ಏರುತ್ತಿರುವ ಬೆಳ್ಳಿ, ಚಿನ್ನದ ದರ

Pinterest LinkedIn Tumblr


ಬೆಂಗಳೂರು: ದೇಶದಲ್ಲಿ ಚಿನ್ನದ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಭಾನುವಾರ ದೇಶದಲ್ಲಿ ಗ್ರಾಂ ಚಿನ್ನಕ್ಕೆ 3,795 ರೂ. ಇದೆ. ಬೆಳ್ಳಿ ಬೆಲೆ ಕೆಜಿಗೆ 250 ರೂ. ಏರಿಕೆಯಾಗಿದ್ದು, 49,350 ರೂ ಇದೆ. ಆದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ 15 ರೂ ಏರಿಕೆಯಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 36,650 ರೂ. ಇದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 49,350ರೂ ಇದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ. ಏರಿಕೆಯಾಗಿದ್ದು, 38,100 ರೂಪಾಯಿ ತಲುಪಿದ್ದು ಮತ್ತು ಒಂದು ಕೆ.ಜಿ. ಬೆಳ್ಳಿ ದರ 49,350 ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 37,950 ರೂಪಾಯಿ ದಾಖಲಾಗಿದೆ. ಇನ್ನು, ಒಂದು ಕೆ.ಜಿ. ಬೆಳ್ಳಿ ದರ 49,350 ರೂಪಾಯಿ ಇದೆ.

ದೇಶದ ಇತರೆ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 38,390 ರೂಪಾಯಿ ಮತ್ತು ಬೆಳ್ಳಿ ದರ 49,350ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 37,300 ರೂ ದಾಖಲಾಗಿದ್ದರೆ ಒಂದು ಕೆ.ಜಿ. ಬೆಳ್ಳಿ ದರ 49,350ರೂಪಾಯಿ ಇದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ – ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

Comments are closed.