ಕರ್ನಾಟಕ

40 ಜನ, ಸತತ 25 ದಿನಗಳ ಕಾರ್ಯಾಚರಣೆಯಿಂದ ಬೋನಿಗೆ ಬಿದ್ದ ನರಭಕ್ಷಕ ಚಿರತೆ

Pinterest LinkedIn Tumblr


ಕುಣಿಗಲ್‌: ಕೊನೆಗೂ ನರಭಕ್ಷಕ ಚಿರತೆ ಬೋನಿಗೆ ಬೀಳುವ ಮೂಲಕ ಸತತ 25 ದಿನಗಳ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಗಿಡದಪಾಳ್ಯ ಸಮೀಪ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಮೇಕೆ ತಿನ್ನಲು ಬಂದ ಚಿರತೆ ಮಂಗಳವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ. ಸುಮಾರು 5-6 ವರ್ಷ ವಯಸ್ಸಿನ ಹೆಣ್ಣು ಚಿರತೆ ಸರೆ ಸಿಕ್ಕಿದೆ. ಅದರೆ ಇದೇ ನರಭಕ್ಷಕ ಚಿರತೆಯೇ ಎಂದು ವೈದ್ಯರು ಖಚಿತ ಪಡಿಸಬೇಕಾಗಿದೆ ಎಂದು ಅರ್‌ಎಫ್‌ಒ ಮಂಜುನಾಥ್‌ ಹೇಳಿದ್ದಾರೆ.

ನಿಟ್ಟುಸಿರು ಬಿಟ್ಟ ಜನತೆ: ಕಳೆದ ಎರಡು ತಿಂಗಳಲ್ಲಿಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಹಾಗಾಗಿ, ಈ ಭಾಗದ ಜನತೆ ತೀರ ಭಯಬೀತರಾಗಿದ್ದರು. ಅಲ್ಲದೆ ಚತುರ ಚಿರತೆ ಪದೇ ಪದೆ ಕಾಣಿಕೊಂಡು ಜನ ಜಾನುವಾರುಗಳ ಮೇಲೆ ದಾಳಿ ಮುಂದುವರಿಸಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಜನ ರಾತ್ರಿ ವೇಳೆ ಮನೆ ಬಿಟ್ಟು ಹೊರಗೆ ಬಾರದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ತಾಲೂಕು ಅಡಳಿತ ಕೂಡ ಟಾಂ ಟಾಂ ಹಾಗೂ ಕರಪತ್ರ ಮುದ್ರಿಸಿ ಹಂಚಿಕೆ ಮಾಡಿ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗಿತ್ತು ಈಗ ಕೊನೆಗೂ ಚಿರತೆ ಬೋನಿಗೆ ಬಿದ್ದಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

Comments are closed.