ಈರುಳ್ಳಿ ಬೆಲೆಯು ದಿನ ದಿನಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ವ್ಯಾಪಾರಿಗಳು ಈರುಳ್ಳಿ ಖರೀದಿಸಲು ಮುಂದಾಗುತ್ತಿಲ್ಲ. ಭಾರೀ ದರ ಕಂಡಿದ್ದ ರೈತರು ಈಗ ದಿನೇ ದಿನೇ ದರ ಇಳಿಕೆಯಾಗುತ್ತಿರುವುದರಿಂದ ಈರುಳ್ಳಿ ಖರೀದಿಸಿ ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಈರುಳ್ಳಿ ಗಲಾಟೆ ಮುಂದುವರೆದಿದೆ.
ಈರುಳ್ಳಿಗೆ ಬಂಗಾರದ ಬೆಲೆ ಬಂದ ನಂತರ ರೈತರು ತುಂಬಾ ಖುಷಿ ಆಗಿದ್ದರು. ಆದರೆ ವಿದೇಶಗಳಿಂದ ಹಾಗೂ ಮಹಾರಾಷ್ಟ್ರದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಇಳಿಕೆಯಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಪ್ರತಿ ಕ್ವಿಂಟಾಲ್ ಗೆ 4000-7000 ರೂಪಾಯಿಯವರೆಗೂ ಇದ್ದ ದರವು, ಡಿಸೆಂಬರ್ 6 ರವರೆಗೆ 15000 ರೂಪಾಯಿಯವರೆಗೂ ಮಾರಾಟವಾಗಿದೆ.
ಈ ಮಧ್ಯೆ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ಆಸೆ ಪಟ್ಟು ಈರುಳ್ಳಿಯನ್ನು ರಾಯಚೂರಿನ ರಾಜೇಂದ್ರ ಗಂಜ್ ಗೆ ತಂದರೆ ಮೂರು ದಿನವಾದರೂ ಈರುಳ್ಳಿ ಖರೀದಿಸುತ್ತಿಲ್ಲ. ಇದರಿಂದ ಮಾರಾಟ ಮಾಡಲು ಬಂದ ರೈತರಿಗೆ ನಿತ್ಯ ದರ ಇಳಿಕೆಯಿಂದಾಗಿ ನಿರಾಸರಾಗುತ್ತಿದ್ದಾರೆ, ಕೆಲವು ಕಡೆ ಇಂದೇ ತಂದ ಈರುಳ್ಳಿ ಖರೀದಿಸಿದರೆ ಇನ್ನು ಕೆಲವು ಕಡೆ ಮೂರು ದಿನವಾದರೂ ಖರೀದಿಸಿಲ್ಲ. ಇದರಿಂದಾಗಿ ಆಕ್ರೋಶಗೊಂಡ ರೈತರು ಮಧ್ಯಾಹ್ನ ಗಂಜ್ ದಿಢೀರ್ ಪ್ರತಿಭಟನೆ ಮಾಡಿದರು. ಅಂದು ತಂದಿರುವ ಈರುಳ್ಳಿಯನ್ನು ಅಂದೇ ಖರೀದಿಸಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ ಈಗ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುತ್ತಿದೆ. ಇಂದು ರಾಯಚೂರು ಮಾರುಕಟ್ಟೆಗೆ 1200 ಕ್ವಿಂಟಾಲ್ ಈರುಳ್ಳಿ ಬಂದಿದ್ದ ಖರೀದಿಸಲಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ 2200 ರೂಪಾಯಿಯಿಂದ 7000 ರೂಪಾಯಿಯವರೆಗೂ ದರ ಆಗಿದೆ. ನಾಳೆಯಿಂದ ಸರಿಯಾಗಿ ಖರೀದಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ದರ ಇಳಿಕೆಯಾಗುತ್ತಿದ್ದಂತೆ ವ್ಯಾಪಾರಿಗಳು ಖರೀದಿಸಲು ಮುಂದಾಗುತ್ತಿಲ್ಲ. ದಾಖಲೆ ದರ ನೋಡಿದ ರೈತರು ಈಗ ನಿರಾಶರಾಗಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
Comments are closed.