ಕರ್ನಾಟಕ

ಬಾಗಲಕೋಟೆಯಲ್ಲಿ ನವ ವಧುವರರಿಗೆ ಸಿಕ್ಕಿದ ದುಬಾರಿ ಗಿಫ್ಟ್ ಏನು ಗೊತ್ತೇ…? ಈ ವರದಿ ನೋಡಿ….

Pinterest LinkedIn Tumblr

ಬಾಗಲಕೋಟೆ: ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೋಲ್​ಸೇಲ್​ನಲ್ಲಿ ಕೆಜಿಗೆ 150 ರೂಪಾಯಿಯಂತೆ ಈರುಳ್ಳಿ ಮಾರಾಟವಾಗುತ್ತಿದ್ದು, ಹಾಪ್​ಕಾಮ್ಸ್​​ನಲ್ಲಿ 165-170 ರೂ.ಗೆ ಕೆಜಿ ಈರುಳ್ಳಿ ದೊರೆಯುತ್ತಿದೆ. ಈರುಳ್ಳಿ ತೋಟಕ್ಕೆ ರೈತರು ಕಾವಲು ಕಾಯುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಮದುವೆಗೆ ಈ ದುಬಾರಿ ತರಕಾರಿ ಗಿಫ್ಟ್​​ ನೀಡಿದ ವಿಡಿಯೋ ಈಗ ಸದ್ದು ಮಾಡಿದೆ.

ಘಟನೆ ನಡೆದಿದ್ದು ಬಾಗಲಕೋಟೆಯಲ್ಲಿ. ಹುಡುಗ-ಹುಡುಗಿ ಮದುವೆ ಸಂಭ್ರಮದಲ್ಲಿದ್ದರು. ವಿವಾಹ ಎಂದಮೇಲೆ ನೆಂಟರಿಷ್ಟರಿಂದ ಒಂದಷ್ಟು ಉಡುಗೊರೆ ಬುರುವುದು ಸಾಮಾನ್ಯ. ಅದೇ ರೀತಿ ಈ ಜೋಡಿಯ ಮದುವೆಗೂ ಅನೇಕರು ಉಡುಗೊರೆಗಳನ್ನು ನೀಡಿದ್ದರು.

ದಂಪತಿಗೆ ಒಂದು ಗಿಫ್ಟ್​ ಬಾಕ್ಸ್​ ಕೊಟ್ಟ ಗೆಳೆಯರು ಬಾಕ್ಸ್​ ತೆಗೆದು ನೋಡುವಂತೆ ಸೂಚಿಸಿದ್ದಾರೆ. ತೆಗೆದು ನೋಡಿದರೆ ದುಬಾರಿ ಈರುಳ್ಳಿ. ಈ ದುಬಾರಿ ಗಿಫ್ಟ್ ನೋಡಿ ಎಲ್ಲರೂ ನಸು ನಕ್ಕಿದ್ದಾರೆ. ಮದುವೆಯಲ್ಲಿ ಈರುಳ್ಳಿ ಬಾಕ್ಸ್ ಕೊಟ್ಟ ವಿಡಿಯೋ ಫುಲ್ ವೈರಲ್ ಆಗಿದೆ.

ಅನೇಕರು ವಧುವರರಿಗೆ ಎಂಥಾ ದುಬಾರಿ ಗಿಫ್ಟ್​ ಸಿಕ್ಕಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ನಮ್ಮ ಮದುವೆಗೆ ಯಾರೂ ಇಷ್ಟು ದುಬಾರಿ ಗಿಫ್ಟ್​ ಕೊಟ್ಟಿಲ್ಲ ಎಂದು ನಕ್ಕಿದ್ದಾರೆ.

Comments are closed.