ಕರ್ನಾಟಕ

ಅತ್ಯಾಚಾರ ಆರೋಪಿಗಳು ಹತರಾಗಿದ್ದಕ್ಕೆ ಸಂಭ್ರಮಿಸಿ ಪೊಲೀಸರಿಗೆ ರಾಖಿ ಕಟ್ಟಿದ ಯುವತಿಯರು

Pinterest LinkedIn Tumblr


ಬಾಗಲಕೋಟೆ: ದೇಶವನ್ನೇ ಬೆಚ್ಚಿ ಬೀಳಿಸಿದ ಹೈದರಾಬಾದ್‌ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್‍ಕೌಂಟರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿ ನಗರದ ಯುವತಿಯರು ಪೊಲೀಸರಿಗೆ ರಾಖಿ ಕಟ್ಟಿದ್ದಾರೆ. ನಗರದ ಇಂಡಿಯನ್ ಯೂತ್ ಫೋರ್ಸ್‌ ಸಂಘಟನೆಯ ಯುವತಿಯರು ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ರಾಖಿ ಕಟ್ಟಿದರು. ನಗರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಹಾಗೂ ಇತರ ಸಿಬ್ಬಂದಿಗೆ ರಾಖಿ ಕಟ್ಟಿದರು.

ನಂತರ ಎಸ್‍ಪಿ ಕಚೇರಿಯಲ್ಲಿ ಡಿಎಸ್‍ಪಿ ಶಿರೂರ ಸೇರಿದಂತೆ ಸಿಬ್ಬಂದಿ ರಾಖಿ ಕಟ್ಟಿ ಅಭಿನಂದಿಸಿದರು. ಸ್ವಪ್ನಾ ರಾಠೋಡ, ಐಶ್ವರ್ಯಾ ವಾಘ್, ಕೋಮಲ್ ಅರಬ್ಬಿ, ಶ್ರೀ ರಾಮದುರ್ಗಕರ, ಮೊಹಮ್ಮದ್ ಢಾಲಾಯತ್, ಡೇನಿಯಲ್ ನ್ಯೂಟನ್, ಮುಖ್ತಾರ್ ಮೋಮಿನ್, ಮಹಾಂತೇಶ ರೋಣದ, ಶಫಿ, ಹಾರೂನ್, ರಾಜು ಪಾಟೀಲ ಸೇರಿದಂತೆ ಯುವಕ, ಯುವತಿಯರು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವತಿಯರು `ಇದೀಗ ಪ್ರಿಯಾಂಕಾ ರೆಡ್ಡಿ ಅಮಾನುಷ ಹತ್ಯೆಗೆ ನೈಸರ್ಗಿಕ ನ್ಯಾಯ ದೊರೆತಿದೆ. ಪಾತಕಿಗಳನ್ನು ಎನ್‍ಕೌಂಟರ್ ಮಾಡಿರುವ ಪೊಲೀಸರು ಮುಂದಿನ ಅನಾಹುತ ತಪ್ಪಿಸಿದ್ದಾರೆ. ಇಂತಹ ಪಾತಕ ಎಸಗಲು ಮುಂದಾಗುವವರಿಗೆ ಇದು ಎಚ್ಚರಿಕೆ ನೀಡಿದಂತಾಗಿದೆ. ಮಹಿಳೆಯರ ಸುರಕ್ಷತೆಗೆ ಪೊಲೀಸರು ಕೈಗೊಂಡಿರುವ ಕ್ರಮ ಶ್ಲಾಘನೀಯವಾಗಿದೆ’ ಎಂದರು.

Comments are closed.