ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಏತನ್ಮಧ್ಯೆ ಸಿ-ವೋಟರ್ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಾರ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬ ವಿವರ ಬಹಿರಂಗಗೊಂಡಿದೆ.
ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ಭರ್ಜರಿ ಮುನ್ನಡೆ ಎಂದು ತಿಳಿಸಿದೆ. ಕಾಂಗ್ರೆಸ್ ಪಕ್ಷಕ್ಕೆ 3ರಿಂದ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ. ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲುವು ಪಡೆಯಲಿದೆ ಎಂದು ತಿಳಿಸಿದೆ.
ಸಂಜೆ 4ಗಂಟೆವರೆಗಿನ ಸಿ ವೋಟರ್ ಸಮೀಕ್ಷೆ ಪ್ರಕಾರ, ಬಿಜೆಪಿ 9ರಿಂದ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ. ಯಶವಂತಪುರದಲ್ಲಿ ಸೋಮಶೇಖರ್ ಗೆ ಮುನ್ನಡೆ, ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡಗೆ ಮುಖಭಂಗ ಎಂದು ಸಮೀಕ್ಷೆ ಹೇಳಿದೆ.
ಮಹಾಲಕ್ಷ್ಮೀ ಲೇಔಟ್ ನಲ್ಲಿ ಗೋಪಾಲಯ್ಯಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಗೆ ಹಿನ್ನಡೆ. ಕೆಆರ್ ಪುರಂ ಕ್ಷೇತ್ರದಲ್ಲಿ ಬಿಜೆಪಿ ಬೈರತಿ ಬಸವರಾಜ್ ಮುನ್ನಡೆ, ಕಾಂಗ್ರೆಸ್ ನ ನಾರಾಯಣಸ್ವಾಮಿಗೆ ತೀವ್ರ ಮುಖಭಂಗವಾಗಲಿದೆ ಎಂದು ಸಿ ವೋಟರ್ ಸಮೀಕ್ಷೆ ಬಹಿರಂಗಪಡಿಸಿದೆ.
ಬಳ್ಳಾರಿಯ ವಿಜಯನಗರದಲ್ಲಿ ಬಿಜೆಪಿಯ ಆನಂದ್ ಸಿಂಗ್ ಮುನ್ನಡೆ, ಕಾಂಗ್ರೆಸ್ ನ ವೆಂಕಟರಾವ್ ಘೋರ್ಪಡೆ ಹಿನ್ನಡೆ ಅನುಭವಿಸಲಿದ್ದಾರೆ ಎಂದು ಮತದಾನೋತ್ತರ ಸಮೀಕ್ಷೆ ತಿಳಿಸಿದೆ. ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಗೆ ಭಾರೀ ಮುನ್ನಡೆ, ಕಾಂಗ್ರೆಸ್ ನ ಪದ್ಮಾವತಿ ಸುರೇಶ್ ಗೆ ಹಿನ್ನಡೆ ಎಂದು ಸಿ ವೋಟರ್ ಮತಗಟ್ಟೆ ಸಮೀಕ್ಷೆ ತಿಳಿಸಿದೆ. ಎಂದು ಸಿ ವೋಟರ್ ಮತಗಟ್ಟೆ ಸಮೀಕ್ಷೆ ತಿಳಿಸಿದೆ.
ಕುತೂಹಲ ಕೆರಳಿಸಿರುವ ಕೆಆರ್ ಪೇಟೆ:
ಕೆಆರ್ ಪೇಟೆಯಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಡುವೆ ಸಮಬಲದ ಸ್ಪರ್ಧೆ ಇದ್ದು ಫಲಿತಾಂಶ ಕುತೂಹಲ ಕೆರಳಿಸಿದೆ. ಬಿಜೆಪಿಯ ನಾರಾಯಣಗೌಡ ಹಾಗೂ ಜೆಡಿಎಸ್ ನ ಬಿಎಲ್ ದೇವರಾಜ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ ಎಂದು ಸಿ ವೋಟರ್ ಮತದಾನೋತ್ತರ ಸಮೀಕ್ಷೆ ತಿಳಿಸಿದೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರಾ, ನೇರ ಹೋರಾಟ. ಬಿಜೆಪಿಯ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್ ನ ಆಂಜಿನಪ್ಪ ನಡುವೆ ಸಮಬಲದ ಹೋರಾಟದ ಮೂಲಕ ಫಲಿತಾಂಶ ಕುತೂಹಲ ಕೆರಳಿಸಿದೆ.
ಶಿವಾಜಿನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಸ್ಪರ್ಧೆ ನಡೆಯಲಿದ್ದು, ಗೆಲುವು ಯಾರಿಗೆ ಎಂಬ ಕುತೂಹಲ ಕೆರಳಿಸಿದೆ. ಬಿಜೆಪಿಯ ಸರವಣ ಹಾಗೂ ಕಾಂಗ್ರೆಸ್ ನ ರಿಜ್ವಾನ್ ನಡುವೆ ನೇರಾನೇರ ಸ್ಪರ್ಧೆ ನಡೆಯಲಿದೆ ಎಂದು ಸಿ ವೋಟರ್ ಮತಗಟ್ಟೆ ಸಮೀಕ್ಷೆ ತಿಳಿಸಿದೆ.
ರಾಣೆಬೆನ್ನೂರಿನಲ್ಲಿ ಕೋಳಿವಾಡ ಮತ್ತು ಅರುಣ್ ಕುಮಾರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ. ಕಾಂಗ್ರೆಸ್ ನ ಕೆಬಿ ಕೋಳಿವಾಡ ಮತ್ತು ಬಿಜೆಪಿಯ ಅರುಣ್ ಕುಮಾರ್ ಸಮಬಲದ ಸ್ಪರ್ಧೆಯ ಮೂಲಕ ಫಲಿತಾಂಶ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಎಲ್ಲೆಲ್ಲಿ ಕಾಂಗ್ರೆಸ್ ಮುನ್ನಡೆ:
ಕಾಗವಾಡದಲ್ಲಿ ಕಾಂಗ್ರೆಸ್ ಪಕ್ಷ್ ರಾಜು ಕಾಗೆಗೆ ಮುನ್ನಡೆ, ಬಿಜೆಪಿಯ ಶ್ರೀಮಂತ್ ಪಾಟೀಲ್ ಗೆ ಹಿನ್ನಡೆ. ಹುಣಸೂರಿನಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಗೆ ಹಿನ್ನಡೆ,
Comments are closed.