ರಾಷ್ಟ್ರೀಯ

ಪಶುವೈದ್ಯೆಯನ್ನು ಸುಡುವಾಗ ಜೀವಂತವಾಗಿದ್ದಳು: ಓರ್ವ ಅತ್ಯಾಚಾರಿ

Pinterest LinkedIn Tumblr


ಹೈದರಾಬಾದ್: ನಾವು ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಸುಡುವಾಗ ಆಕೆ ಜೀವಂತವಾಗಿದ್ದಳು ಎಂದು ನಾಲ್ವರು ಪ್ರಮುಖ ಆರೋಪಿಗಳ ಪೈಕಿ ಓರ್ವ ಬಾಯಿ ಬಿಟ್ಟಿದ್ದಾನೆ.

ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆಗೈದು ಶವಗಳನ್ನು ಸುಟ್ಟುಹಾಕಿದ ಅಮಾನವೀಯ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಬಹಿರಂಗಪಡಿಸುತ್ತಿದ್ದಾರೆ.

ಸಾಮೂಹಿಕ ಅತ್ಯಾಚಾರದ ಬಳಿಕ ಪಶುವೈದ್ಯೆ ಓಡಿಹೋಗಬಾರದು ಎನ್ನುವ ಉದ್ದೇಶದಿಂದ ಅವಳ ಕೈ ಕಾಲುಗಳನ್ನು ಕಟ್ಟಿದ್ದೆವು. ಅತ್ಯಾಚಾರದ ನಂತರವೂ ಸಂತ್ರಸ್ತೆಗೆ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದೆವು. ಸಂತ್ರಸ್ತೆ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಸೇತುವೆಯ ಕೆಳಗೆ ಸಾಗಿಸಲಾಗಿತ್ತು. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ವಿ ಎಂದು ಮುಖ್ಯ ಆರೋಪಿ ಮೊಹಮ್ಮದ್ ಪಾಷಾ, ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಬೆಂಕಿ ಹಚ್ಚುವುದಕ್ಕೂ ಮುನ್ನ ಪಶುವೈದ್ಯೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದೇವು. ಆದರೆ ಬೆಂಕಿಯ ಹಚ್ಚಿದಾಗ ಅವಳು ಕಿರುಚಲು ಪ್ರಾರಂಭಿಸಿದಳು. ಹೀಗಾಗಿ ಸಂತ್ರಸ್ತೆ ಸಾಯುವವರೆಗೂ ನೋಡುತ್ತಲೇ ಇದ್ದೆವು. ಏಕೆಂದರೆ ಒಂದು ವೇಳೆ ಆಕೆ ಜೀವಂತವಾಗಿ ಉಳಿದರೆ ಪೊಲೀಸರು ನಮ್ಮನ್ನು ಹಿಡಿಯುತ್ತಾರೆ ಎನ್ನುವ ಭಯ ನಮ್ಮಲ್ಲಿತ್ತು ಎಂದು ಆರೋಪಿ ಪಾಷಾ ಬಾಯಿ ಬಿಟ್ಟಿದ್ದಾನೆ.

ಏನಿದು ಪ್ರಕರಣ?:
ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Comments are closed.