ಕರ್ನಾಟಕ

ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಈರುಳ್ಳಿ ದರ!

Pinterest LinkedIn Tumblr


ಬೆಳಗಾವಿ: ಉತ್ಪಾದನೆ ಕೊರತೆಯಿಂದ ಗಗನಮುಖಿಯಾಗಿರುವ ಈರುಳ್ಳಿ ಬೆಲೆ ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದೆ. ಬೆಳಗಾವಿ ಎಪಿಎಂಸಿಯಲ್ಲಿ ಬುಧವಾರ ಕ್ವಿಂಟಾಲ್ ಈರುಳ್ಳಿ ಗರಿಷ್ಠ 15,500 ರೂ.ವರೆಗೆ ಮಾರಾಟವಾಗಿದೆ.

ಬುಧವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಕೇವಲ 3,500 ಕ್ವಿಂಟಾಲ್ ಈರುಳ್ಳಿ ಬಂದಿತ್ತು. ಉತ್ಪನ್ನ ಕಡಿಮೆ ಇರುವ ಹಿನ್ನೆಲೆಯಲ್ಲಿ ಈರುಳ್ಳಿ ಖರೀದಿಸಲು ಭಾರಿ ಪೈಪೋಟಿ ಏರ್ಪಟ್ಟಿದೆ. ಗೋವಾ, ದೆಹಲಿ, ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ಭಾಗಗಳಿಂದಲೂ ವ್ಯಾಪಾರಿಗಳು ಬೆಳಗಾವಿ ಎಪಿಎಂಸಿಗೆ ಬಂದಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಹರಾಜಿಗೆ ಈರುಳ್ಳಿ ಬಂದಿರಲಿಲ್ಲ. ಲಭ್ಯವಿರುವ 3,500 ಕ್ವಿಂಟಾಲ್​ಈರುಳ್ಳಿ ಖರೀದಿಸಲು ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತು. 2 ವಾರದ ಹಿಂದೆ ಕ್ವಿಂಟಾಲ್​ಗೆ 6,500 ರೂ. ನಿಂದ 8,340 ರೂ. ವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ 15,500 ರೂ. ಗಡಿ ತಲುಪಿದೆ.

ಕರಾವಳಿಗೆ ಟರ್ಕಿ ಈರುಳ್ಳಿ
ಈರುಳ್ಳಿ ದರ ಏರಿಕೆ ಮತ್ತು ಪೂರೈಕೆ ಕೊರತೆಯಿಂದ ಗ್ರಾಹಕರಿಗೆ ಸಮಸ್ಯೆಯಾಗಿರುವ ನಡುವೆಯೇ ಗಾತ್ರದಲ್ಲಿ ದೊಡ್ಡದಾಗಿರುವ ಟರ್ಕಿ ಈರುಳ್ಳಿ ಮಂಗಳೂರು ಮಾರುಕಟ್ಟೆ ಪ್ರವೇಶಿಸಿದೆ.

ನಗರದ ಬಂದರು ಮಾರುಕಟ್ಟೆ ಪ್ರದೇಶಕ್ಕೆ ಮಂಗಳವಾರ 30 ಟನ್​ನಷ್ಟು ಟರ್ಕಿ ಈರುಳ್ಳಿ ಬಂದಿದ್ದು, ಪ್ರತಿ ಕೆಜಿಗೆ 135 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟ, ಗಾತ್ರ, ದಪ್ಪದಾದ ಸಿಪ್ಪೆ, ರುಚಿ, ಖಾರ ಹೆಚ್ಚಿರುವುದು ಮತ್ತಿತರ ವಿಶೇಷ ಗುಣಗಳ ಟರ್ಕಿ ಈರುಳ್ಳಿಗೆ ಖರೀದಿದಾರರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಒಂದು ಕೆಜಿಗೆ ಗರಿಷ್ಠ ನಾಲ್ಕು ಈರುಳ್ಳಿ ಬರುತ್ತವೆ. ಈಜಿಪ್ಟ್ ಈರುಳ್ಳಿ ಮಂಗಳೂರಿಗೆ ಬಂದಿದ್ದರೂ, ಗುಣಮಟ್ಟ ಕಳಪೆಯಾಗಿದ್ದ ಹಿನ್ನೆಲೆಯಲ್ಲಿ ಯಾರೂ ಆಸಕ್ತಿ ತೋರಿಸಿರಲಿಲ್ಲ.
…………………………………………………
ಆಂತರಿಕ ಬಳಕೆಗೆ ಅಗತ್ಯವಿದ್ದಷ್ಟು ಈರುಳ್ಳಿ ಆಮದಿಗೆ ಕೇಂದ್ರ ತಕ್ಷಣ ಮುಂದಾಗ ಬೇಕಿತ್ತು. ಕಾಳಸಂತೆಕೋರರ ಅಕ್ರಮದಾಸ್ತಾನು ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳಬೇಕಾಗಿತ್ತು. ಎರಡೂ ಸರ್ಕಾರಗಳ ವೈಫಲ್ಯದಿಂದಾಗಿಯೇ ಬೆಲೆ ಏರಿಕೆ ಬಿಸಿಯಿಂದ ಜನ ಬೇಯುವಂತಾಗಿದೆ.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Comments are closed.