ಕರ್ನಾಟಕ

ಹೆದ್ದಾರಿಯಲ್ಲಿ ಗಜಪಡೆಗಳ ಅಟ್ಟಹಾಸ – ವಾಹನ ಸವಾರರು ಮತ್ತು ಸಾರ್ವಜನಿಕರು ಕಂಗಾಲು

Pinterest LinkedIn Tumblr

ಮೆಟ್ಟುಪಾಳ್ಯಂ: ತಮಿಳುನಾಡಿನ ಕೊಯಮತ್ತೂರು ಹೆದ್ದಾರಿಯಲ್ಲಿ ಗಜಪಡೆಗಳ ಅಟ್ಟಹಾಸದಿಂದ ವಾಹನ ಸವಾರರು ಮತ್ತು ಸಾರ್ವಜನರಿಕರು ಕಂಗಾಲಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೆಟ್ಟುಪಾಳ್ಯಂ ಬಳಿ ರಾಜ್ಯ ಹೆದ್ದಾರಿಯಲ್ಲಿ ಐದು ಆನೆಗಳು ರಸ್ತೆಯ ಟಡ್ಡಕಂಬಿಗಳನ್ನು ಮುರಿದು ಹೆದ್ದಾರಿಯಲ್ಲಿ ಮುನ್ನುಗ್ಗಿದವು. ಆನೆಗಳ ರೋಷಾವೇಷ ಕಂಡ ನಾಗರಿಕರು ಭಯಭೀತರಾದರು.

ವಾಹನಗಳ ಸವಾರರು ವಾಹನಗಳನ್ನು ನಿಲ್ಲಿಸಿ ಗಜಪಡೆ ಹಾದು ಹೋಗಲು ಅನುವು ಮಾಡಿಕೊಟ್ಟರು. ಕೊಯಮತ್ತೂರು-ಮೆಟ್ಟುಪಾಳ್ಯಂ ಗಡಿ ಪ್ರದೇಶದ ಅರಣ್ಯದಿಂದ ಆನೆಗಳು ನುಗ್ಗಿ ದಾಂಧಲೆ ನಡೆಸುವುದು ಇಲ್ಲಿ ಮಾಮೂಲಿ ಸಂಗತಿ.

ಇಂದು ಬೆಳಗ್ಗೆಯೂ ಕೂಡ ಕಾಡಾನೆಗಳು ರಸ್ತೆಗೆ ನುಗ್ಗಿ ಮನಸೋಇಚ್ಚೆ ಸಂಚರಿಸಿವುದು. ಸುದ್ದಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮಾವುತರು ಸ್ಥಳಕ್ಕೆ ಧಾವಿಸಿ ಆನೆಗಳು ಕಾಡಿಗೆ ಹಿಂದಿರುಗುವಂತಾಗಲು ಶ್ರಮಿಸಿದರು.

Comments are closed.