ಅಂತರಾಷ್ಟ್ರೀಯ

ಸುಂದರ್ ಪಿಚ್ಬೈ ಅಲ್ಫಾ ಬೆಟ್ ಸಂಸ್ಥೆಯ ಅತ್ಯುನ್ನತ ಸ್ಥಾನವಾದ ಸಿಇಒ ಹುದ್ದೆ ಬಡ್ತಿ

Pinterest LinkedIn Tumblr

ವಾಷಿಂಗ್ಟನ್: ವಿಶ್ವವಿಖ್ಯಾತ ಸರ್ಚ್ ಎಂಜಿನ್ ಗೂಗಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ಸುಂದರ್ ಪಿಚ್ಬೈ ಅವರಿಗೆ ಅದರ ಮಾತೃ ಸಂಸ್ಥೆ ಆಲ್ಪಾಬೆಟ್‍ನ ಅತ್ಯುನ್ನತ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಈ ಮೂಲಕ ಭಾರತೀಯ ಸಂಜಾತ ಸುಂದರ್ ವಿಶ್ವದ ಅತ್ಯಂತ ಪ್ರಬಲ ಕಾರ್ಪೊರೇಟ್ ನಾಯಕರಲ್ಲಿ ಒಬ್ಬರೆಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.

ಇಂಟರ್‍ನೆಟ್ ದೈತ್ಯ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಲಾರಿ ಪೇಜ್ ಮತ್ತು ಸರ್ಗೈ ಬ್ರಿನ್, ಕಂಪನಿಯ ಆಡಳಿತ ಮಂಡಳಿಯಿಂದ ನಿರ್ಗಮಿಸಿದ ನಂತರ ಸುಂದರ್ ಪಿಚ್ಬೈ ಅಲ್ಫಾ ಬೆಟ್ ಸಂಸ್ಥೆಯ ಅತ್ಯುನ್ನತ ಸ್ಥಾನವಾದ ಸಿಇಒ ಹುದ್ದೆಗೇರಿದ್ದಾರೆ. ಇದು ಕಾರ್ಪೊರೇಟ್ ಜಗತ್ತಿನ ಅಗ್ರಮಾನ್ಯ ಸ್ಥಾನಗಳಲ್ಲಿ ಒಂದು.

ಲಾರಿ ಮತ್ತು ಬ್ರಿನ್ ಆಲ್ಫಾಬೆಟ್ ಸಂಸ್ಥೆಯಲ್ಲಿ ಅನುಕ್ರಮವಾಗಿ ಸಿಇಓ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಈಗ ಆ ಸ್ಥಾನಗಳನ್ನು ತೊರೆದಿರುವುದರಿಂದ 47 ವರ್ಷದ ಪಿಚ್ಬೈ ಈ ಸಂಸ್ಥೆಯನ್ನು ಮುನ್ನಡೆಸಲಿದ್ಧಾರೆ.

ದೀರ್ಘಕಾಲ ಗೂಗಲ್‍ನ ಸಿಒಒ ಆಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದ ಇವರ ಕಾರ್ಯಕ್ಷಮತೆ ಮತ್ತು ನಾಯಕತ್ವ ಗುಣದಿಂದಾಗಿ ಈ ಅತ್ಯುನ್ನತ ಹೊಣೆಗಾರಿಕೆಯ ಸ್ಥಾನ ಲಭಿಸಿದೆ.

Comments are closed.