ಕರ್ನಾಟಕ

ಭಾರತೀಯ ನೌಕಾಪಡೆಯ ಪ್ರಥಮ ಮಹಿಳಾ ಪೈಲಟ್ ಸಬ್ ಲೆಫ್ಟಿನೆಂಟ್ ಶಿವಾಂಗಿ ಸೇರ್ಪಡೆ

Pinterest LinkedIn Tumblr

ಕೊಚ್ಚಿ: ಸಬ್ ಲೆಫ್ಟಿನೆಂಟ್ ಶಿವಾಂಗಿ ಭಾರತೀಯ ನೌಕಾಪಡೆಯ ಪ್ರಥಮ ಮಹಿಳಾ ಪೈಲಟ್ ಆಗಿ ಸೋಮವಾರ ಸೇರ್ಪಡೆಗೊಂಡರು.

ಪ್ರಾಥಮಿಕ ತರಬೇತಿ ನಂತರ 2018ರಲ್ಲಿ ನೌಕಾಪಡೆ ಪ್ರವೇಶಿಸಿದ್ದ ಶಿವಾಂಗಿ, ಕಠಿಣ ಕಾರ್ಯಾಚರಣೆ ತರಬೇತಿ ಮುಗಿಸಿ ಸೋಮವಾರ ಅಧಿಕೃತವಾಗಿ ಸೇರ್ಪಡೆಯಾದರು. ಕೊಚ್ಚಿ ನೌಕಾನೆಲೆಯಲ್ಲಿ ಅವರು ಡಾರ್ನಿಯರ್ ಕಣ್ಗಾವಲು ವಿಮಾನ ಹಾರಾಟ ನಡೆಸಲಿದ್ದಾರೆ. ಬಿಹಾರದ ಮುಜಾಫರ್​ಪುರದಲ್ಲಿ ಜನಿಸಿದ ಶಿವಾಂಗಿ ಡಿಎವಿ ಪಬ್ಲಿಕ್ ಸ್ಕೂಲ್​ನಲ್ಲಿ ಅಧ್ಯಯನ ಮಾಡಿದ್ದರು.

ವಿಮಾನ ಪೈಲಟ್ ಆಗಬೇಕೆನ್ನುವುದು ನನ್ನ ಬಹು ಕಾಲದ ಕನಸು. ಅದನ್ನು ಸಾಧಿಸಿದ್ದೇನೆ. ನನಗೆ ಅಪಾರ ಸಂತೋಷವಾಗುತ್ತಿದೆ. ತರಬೇತಿಯ 3ನೇ ಹಂತವನ್ನು ಎದುರುನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Comments are closed.