ಕರ್ನಾಟಕ

ಬೆಳಗಾವಿಯ ಅನರ್ಹ ಶಾಸಕನಿಗೆ ಹನಿಟ್ರ್ಯಾಪ್: ಅಶ್ಲೀಲ ಸಂಭಾಷಣೆ ಲೀಕ್

Pinterest LinkedIn Tumblr


ಬೆಂಗಳೂರು(ಡಿ. 01): ರಾಜ್ಯ ರಾಜಕಾರಣಿಗಳನ್ನು ಹನಿಟ್ರ್ಯಾಪ್​ಗೆ ಸಿಲುಕಿಸಿರುವ ಪ್ರಕರಣಗಳು ಸದ್ದು ಮಾಡುವುದು ನಿಂತಿಲ್ಲ. ಪ್ರಕರಣದ ಪ್ರಮುಖ ಆರೋಪಿಯ ವಿಚಾರಣೆಯನ್ನು ಸಿಸಿಬಿ ಪೊಲೀಸರು ತೀರಾ ಅವಸರದಲ್ಲಿ ಅಂತ್ಯಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಆಡಿಯೊವೊಂದು ವೈರಲ್ ಆಗುತ್ತಿದೆ. ಹನಿಟ್ರ್ಯಾಪ್​ನ ಎಲ್ಲಾ ವಿಡಿಯೋ, ಆಡಿಯೊ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೂ ಕೆಲ ಆಡಿಯೋ ವಿಡಿಯೋಗಳು ಹೊರಗೆ ಸೋರಿಕೆಯಾಗುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

ಬೆಳಗಾವಿ ಜಿಲ್ಲೆಯ ಅನರ್ಹ ಶಾಸಕರೊಬ್ಬರು ಕರಾವಳಿ ಮೂಲದ ಯುವತಿ ಜೊತೆ ನಡೆಸಿರುವ ಅಶ್ಲೀಲ ಸಂಭಾಷಣೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕುಮಾರಸ್ವಾಮಿ ಫಾರ್ ಸಿಎಂ ಎಂಬ ಫೇಸ್​ಬುಕ್ ಪೇಜ್​ನಲ್ಲಿ ಈ ಆಡಿಯೊವನ್ನು ಅಪ್​ಲೋಡ್ ಮಾಡಲಾಗಿದೆ.

ಕರಾವಳಿ ಮೂಲದ ಈ ಯುವತಿಯನ್ನು ಬಳಸಿ ಬೆಳಗಾವಿಯ ಶಾಸಕನನ್ನು ಹನಿಟ್ರ್ಯಾಪ್​ಗೆ ಒಳಪಡಿಸಲಾಗಿದೆ. ಶಾಸಕರ ಜೊತೆ ವಿಶ್ವಾಸ ಬೆಳೆಸಿದ ಈ ಯುವತಿ ಫೋನ್​ನಲ್ಲಿ ಬಹಳ ಸಲುಗೆಯಿಂದ ಮಾತನಾಡಿದ್ದಾಳೆ. ಈ ಫೋನ್​ನಲ್ಲಿರುವ ಆಡಿಯೋ ಪ್ರಕಾರ, ಯುವತಿಯನ್ನು ಖಾಸಗಿಯಾಗಿ ಭೇಟಿಯಾಗುವಂತೆ ಈ ಅನರ್ಹ ಶಾಸಕರು ಆಹ್ವಾನ ಕೊಟ್ಟಿದ್ದಾರೆ. ಆಕೆಯ ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಾಯಿಸುತ್ತಾನೆ. ಬೆಂಗಳೂರಿನಲ್ಲಿ ಒಂದು ಫ್ಲಾಟ್ ಕೊಡಿಸುವಂತೆ ಆ ಯುವತಿ ಬೇಡಿಕೆ ಇಟ್ಟಿರುತ್ತಾಳೆ. ಉಪಚುನಾವಣೆಯ ನಂತರ ಫ್ಲ್ಯಾಟ್ ಕೊಡಿಸುವುದಾಗಿ ಅನರ್ಹ ಶಾಸಕ ಭರವಸೆ ನೀಡುತ್ತಾರೆ.

ಆದರೆ, ಈ ಆಡಿಯೋದ ನೈಜತೆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಒಟ್ಟಾರೆ ರಾಜ್ಯದ ಹಲವಾರು ರಾಜಕಾರಣಿಗಳು ಈ ಹನಿಟ್ರ್ಯಾಪ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅನರ್ಹ ಶಾಸಕರು, ಬಿಜೆಪಿ ಶಾಸಕರು, ಕೆಲ ಸಂಸದರು ಹಾಗೂ ಇತರ ರಾಜಕಾರಣಿಗಳು ಈ ಜಾಲದಿಂದ ವಂಚನೆಗೊಳಗಾಗಿದ್ದಾರೆ. ಬಿಎಸ್​ವೈ ಸರ್ಕಾರಕ್ಕೆ ಈ ಆಡಿಯೋ ಪ್ರಕರಣ ದೊಡ್ಡ ತಲೆನೋವಾಗಿದೆ.

Comments are closed.