ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಮಾಫಿಯಾವನ್ನು ಭೇದಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ₹1 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಬೆಂಗಳೂರು ನಗರ ಕಮಿಷನರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕೆನಡಾ ಮೂಲದ ಹೈಡ್ರೋ ಗಾಂಜಾ ಮಾರಾಟಗಾರನಾಗಿರುವ ಕೋಲ್ಕತ್ತಾ ಮೂಲದ ಆಲೀಫ್ ಸಲೀಂ ಹಾಗೂ ರೋಹಿತ್ ದಾಸ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಆಯಪ್ವೊಂದರ ಮುಖಾಂತರ ಪರಸ್ಪರ ಸಂಪರ್ಕ ಇಟ್ಟುಕೊಳ್ಳುತ್ತಿದ್ದರು. ಗಾಂಜಾ ಚಾಕೊಲೇಟ್, ಆಶೀಶ್ ಆಯಿಲ್ ಇರುವಂತಹ ಈ ಸಿಗರೇಟ್ ಟ್ಯೂಬ್ ಮೂಲಕ ಕೆನಡಾ ಗಿರಾಕಿಗಳಿಗೆ ಕೊರಿಯರ್ ಮುಖಾಂತರ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಮಾದಕ ವ್ಯಸನಿಗಳಿಗೆ ಆರೋಪಿಗಳು ಈ ಡ್ರಗ್ಸ್ ಅನ್ನು ಚಾಕೊಲೇಟ್ ಹಾಗೂ ಪೆಪ್ಪರ್ಮೆಂಟ್ ಬಾಕ್ಸ್ಗಳಲ್ಲಿ ಸಾಗಿಸಿ ಬುದ್ಧಿವಂತಿಕೆ ಹೆಚ್ಚಾಗುತ್ತೆ ಎಂದು ಪ್ರಚಾರ ಮಾಡ್ತಾ ಇದ್ದರು ಎನ್ನಲಾಗಿದೆ.
Comments are closed.