ರಾಷ್ಟ್ರೀಯ

ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ

Pinterest LinkedIn Tumblr

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವ ಮಧ್ಯೆಯೂ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 5 ಪೈಸೆ ಹೆಚ್ಚಳ ಕಂಡಿದೆ. ಎರಡು ದಿನಗಳ ಸ್ಥಿರತೆ ನಂತ್ರ ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಇನ್ನು ನಾಲ್ಕು ದಿನಗಳ ಸ್ಥಿರತೆ ನಂತ್ರ ಶುಕ್ರವಾರ ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಡಿಸೇಲ್ ಬೆಲೆ ಇಂದು ನಾಲ್ಕು ಪೈಸೆ ಹೆಚ್ಚಾಗಿದೆ. ಇಂಡಿಯನ್ ಆಯಿಲ್ ವೆಬ್ಸೈಟ್ ಮಾಹಿತಿ ಪ್ರಕಾರ ದೆಹಲಿಯಲ್ಲಿ ಐದು ಪೈಸೆ ಹೆಚ್ಚಳದೊಂದಿಗೆ ಪೆಟ್ರೋಲ್ ಬೆಲೆ ಲೀಟರ್ ಗೆ 74.81 ರೂಪಾಯಿಯಾಗಿದೆ. ಇನ್ನು ಡಿಸೇಲ್ ಬೆಲೆ 65.78 ರೂಪಾಯಿಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆಯಲ್ಲಿ ಇಂದು ಹೆಚ್ಚಳ ಕಂಡು ಬಂದಿದೆ. ಪೆಟ್ರೋಲ್ ಬೆಲೆ ಇಂದು 10 ಪೈಸೆ ಹೆಚ್ಚಾಗಿದ್ದು, ಲೀಟರ್ ಪೆಟ್ರೋಲ್ ಬೆಲೆ 77 ರೂಪಾಯಿ 32 ಪೈಸೆಯಾಗಿದೆ. ಇನ್ನು ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಡಿಸೇಲ್ ಲೀಟರ್ ಗೆ 67 ರೂಪಾಯಿ 97 ಪೈಸೆಯಂತೆ ಮಾರಾಟವಾಗ್ತಿದೆ.

Comments are closed.