ಕರ್ನಾಟಕ

ಫೋನ್ ಕರೆ ಸ್ವೀಕರಿಸಲಿಲ್ಲ ಎಂದು ಯುವತಿ ಆತ್ಮಹತ್ಯೆ: ಮನನೊಂದ ಯುವಕನು ಆತ್ಮಹತ್ಯೆ

Pinterest LinkedIn Tumblr


ಹುಬ್ಬಳ್ಳಿ: ಮದುವೆ ಆಗುವ ಹುಡುಗ ಫೋನ್ ಕರೆ ಸ್ವೀಕರಿಸಿಲಿಲ್ಲಾ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯಗೆ ಶರಣಾದರೆ, ಇತ್ತ ಪ್ರೇಯಸಿ ಸಾವಿನ ನೋವಿನಿಂದ ನೇಣಿಗೆ ಕೊರಳೊಡ್ಡಿದ ಘಟನೆ ನಡೆದಿದೆ.

ರೇಖಾ (19) ವಿಷ ಸೇವಿಸಿದ ಯುವತಿಯಾಗಿದ್ದು, ವಿಷ್ಣು ಪಗಲಾಪುರ (20 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಬುಧವಾರ ಸಂಜೆ ವೇಳೆ ರೇಖಾ ವಿಷ ಸೇವಿಸಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಪ್ರೇಯಸಿಯ ಸಾವು ಕಂಡ ವಿಷ್ಣು ಮನೆಗಡ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಕರ್ಕಿ ಬಸವೇಶ್ವರ ನಗರದ ನಿವಾಸಿಗಳಾಗಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಇಬ್ಬರು ಕಳೆದ ಐದಾರು ವರ್ಷಗಳಿಂದ ‌ಪ್ರೀತಿ ಮಾಡುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿತ್ತು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಹಿರಿಯರು ಎರಡು ಮನೆಯವರನ್ನು ತಿಳಿ ಹೇಳಿ ನಿಶ್ಚಿತಾರ್ಥ ಮಾಡಿಸಿದ್ದಾರು. ನಿಶ್ಚಿತಾರ್ಥ ಅಗಿ ಐದಾರು ತಿಂಗಳು ಮಾತ್ರ ಕಳೆದಿವೆ. ಇನ್ನೇನು ಜನವರಿಯಲ್ಲಿ ಮದುವೆ ಮಾಡಬೇಕು ಎನ್ನುವ ತಯಾರಿ ಕೂಡ ನಡೆದಿತ್ತು. ಅದರೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಇಹಲೋಕ ತ್ಯೆಜಿಸಿದ್ದಾರೆ.

ಕರೆ ಸ್ವೀಕರಿಸಲಿಲ್ಲ!

ಆದ್ರೆ ನಿನ್ನೆ ರೇಖಾ, ವಿಷ್ಣುಗೆ ದಿನವೀಡಿ ಫೋನ್ ಕರೆ ಮಾಡಿದ್ದಾಳೆ. ಆದ್ರೆ ವಿಷ್ಣು ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಮನನೊಂದ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿಯುತ್ತಿದಂತೆ ತನ್ನ ಅಜ್ಜಿಯ ಮನೆಗೆ ತೆರಳಿದ ವಿಷ್ಣು ನೇಣಿಗೆ ಕೊರಳೊಡಿದ್ದಾನೆ. ಬಾಳಿ ಬದುಕಬೇಕಾದ ಇಬ್ನರ ಅಗಲಿಕೆಯಿಂದ ಎರಡು ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಬೆಂಡಿಗೇರಿ‌‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments are closed.