ಕರ್ನಾಟಕ

ಯಾವ ಸರ್ಕಾರ ಉಳಿಸುತ್ತೇನೆ ಎಂಬುದನ್ನು ಡಿ.9ರಂದು ಗೊತ್ತಾಗುತ್ತೆ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿಗಳು ಪ್ರಾಣ ಕೊಡಬೇಕಾಗಿರೋದು ಈ ರಾಜ್ಯದ ಜನರ ಸಮಸ್ಯೆಗಳಿಗಾಗಿ ಆದರೆ ಇವರ ಬಾಯಲ್ಲಿ ಅನರ್ಹರ ಆಮಿಷಕ್ಕೆ ಒಳಗಾಗಿರುವ ಶಾಸಕರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳಿದ್ದಾರೆ.ಇಂತಹ ಮುಖ್ಯಮಂತ್ರಿ ನಿಮಗೇ ಬೇಕಾ? ಎಂದು ಮತದಾರರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಯಶವಂತಪುರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಅವರು,ನಾನು ಎಂದಿಗೂ ಜಾತಿಯ ಹೆಸರಲ್ಲಿ ರಾಜಕಾರಣ ಮಾಡಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಡ ಜನರು ಭೇಟಿ ಮಾಡುವು ದಕ್ಕೆ ಸಾಧ್ಯಗಾವುದಿಲ್ಲ.ಈ ಭಾಗದ ಮಾಜಿ ಶಾಸಕರು ಹಿಂದಿನ ಸರ್ಕಾರ ಹಣವನ್ನೇ ನೀಡಿಲ್ಲ ಎಂದು ಹೇಳಿದ್ದಾರೆ.

ನಾನು ಅವರಿಗೆ ಸವಾಲು ಹಾಕುತ್ತೇನೆ.ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ನೂರಾರು ಕೋಟಿ ಈ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೇನೆ. ಈ ಅಭ್ಯರ್ಥಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ವಿರುದ್ಧ ಕುಮಾರಸ್ವಾಮಿ ತಿರುಗೇಟು ನೀಡಿದರು.

ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು 17 ಶಾಸಕರಿಗೆ ಆಮಿಷ ಒಡ್ಡಿ ನಮ್ಮ‌ ಸರ್ಕಾರ ಪತನಗೊಳಿಸಿದರು. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ಪ್ರಚಾರ ದ ವೇಳೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ದು,ಅನರ್ಹರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳುತ್ತಿದ್ಧಾರೆ.

ಗೋಕಾಕ್ ನಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಮುದಾಯ ಏನಾದ ರೂ ಆಗಲಿ, ಬೇರೆಯವರು ಗೆಲ್ಲಲಿ ಎಂದು ಹೇಳುತ್ತಾರೆ. ಇವರು ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ನೀವೇ ನೋಡಿ ಎಂದು ಲೇವಡಿ ಮಾಡಿದರು.

Comments are closed.