ಕರ್ನಾಟಕ

ಡಿ.1 : ಬೆಂಗಳೂರು-ಪಂಪಾ ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ಬಸ್ ಸೇವೆ ಆರಂಭ

Pinterest LinkedIn Tumblr

ಕೆಎಸ್‌ಆರ್ ಬೆಂಗಳೂರು-ಪಂಪಾ ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲಿದೆ. ಡಿಸೆಂಬರ್ 1ರಿಂದ ಈ ಮಾರ್ಗದಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕೇಂದ್ರ ವಿಭಾಗದ ವತಿಯಿಂದ ಈ ಬಸ್ ಸೇವೆ ಆರಂಭಿಸಲಾಗುತ್ತಿದೆ. ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ಹೊಸದಾಗಿ ಐಷಾರಾಮಿ ಬಸ್‌ಗಳು ಸಂಚಾರ ನಡೆಸುತ್ತವೆ.

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಪಂಪಾಗೆ ರಾಜಹಂಸ ಮತ್ತು ವೋಲ್ವೋ ಬಸ್‌ಗಳು ಸಂಚಾರ ನಡೆಸಲಿವೆ. ರಾಜಹಂಸ ಬಸ್‌ನಲ್ಲಿ 940 ರೂ.ಗಳು, ವೋಲ್ವೋ ಬಸ್‌ಗಳಲ್ಲಿ 1250 ರೂ. ಗಳ ಪ್ರಯಾಣ ದರವನ್ನು ವಯಸ್ಕರಿಗೆ ನಿಗದಿ ಮಾಡಲಾಗಿದೆ.

ವೇಳಾಪಟ್ಟಿ ಇಲ್ಲಿದೆ….
* ಬೆಂಗಳೂರು-ಪಂಪಾ (ರಾಜಹಂಸ) : ಶಾಂತಿನಗರದಿಂದ ಹೊರಡುವ ಸಮಯ ಮಧ್ಯಾಹ್ನ 1 ಗಂಟೆ, ಪಂಪಾ ತಲುಪುವ ಸಮಯ 8.15. ಪಂಪಾದಿಂದ 5ಗಂಟೆಗೆ ಹೊರಡಲಿರುವ ಬಸ್ ರಾತ್ರಿ 12 ಗಂಟೆಗೆ ಬೆಂಗಳೂರು ತಲುಪಲಿದೆ.
* ಬೆಂಗಳೂರು-ಪಂಪಾ (ವೋಲ್ವೋ) : ಶಾಂತಿನಗರದಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಬಸ್ ಪಂಪಾಗೆ 6.45ಕ್ಕೆ ತಲುಪಲಿದೆ. ಪಂಪಾದಿಂದ 6 ಗಂಟೆಗೆ ಹೊರಡುವ ಬಸ್ 9.45ಕ್ಕೆ ಬೆಂಗಳೂರು ತಲುಪಲಿದೆ.

ಕಳೆದ ವರ್ಷ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಪಂಪಾಗೆ ಪ್ರಾಯೊಗಿಕವಾಗಿ ಬಸ್ ಸಂಚಾರ ಆರಂಭಿಸಿತ್ತು.ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು ಆದ್ದರಿಂದ, ಈ ವರ್ಷ ಐಷಾರಾಮಿ ಬಸ್‌ಗಳನ್ನು ಓಡಿಸುತ್ತಿದೆ.

Comments are closed.