ಕರ್ನಾಟಕ

ಚಂದ್ರಯಾನ-3 ಯೋಜನೆಯತ್ತ ಮತ್ತೊಮ್ಮೆ ಇಡೀ ವಿಶ್ವದ ಕಣ್ಣು

Pinterest LinkedIn Tumblr

ನವದೆಹಲಿ: ಇಡೀ ವಿಶ್ವದ ಕುತೂಹಲ ಕೆರಳಿಸಿದ್ದ ಚಂದ್ರಯಾನ-2 ಅಭಿಯಾನ ಕಟ್ಟ ಕಡೆಯ ಕ್ಷಣದಲ್ಲಿ ವಿಫಲವಾದರೂ ಧೃತಿಗೆಡದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಚಂದ್ರಯಾನ-3ಗೆ ಸಜ್ಜಾಗಿದ್ದು , ನೀಲಿ ನಕ್ಷೆಯೊಂದು ಸಿದ್ಧವಾಗಿದೆ.

ರಾಜ್ಯಸಭೆಯಲ್ಲಿ ಅಣುಶಕ್ತಿ ಮತ್ತು ಅಂತರಿಕ್ಷ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.ಚಂದ್ರನ ಶೋಧನೆ ಕಾರ್ಯಾಚರಣೆಗೆ ಇಸ್ರೋ ನೀಲಿ ನಕ್ಷೆ ತಯಾರಿಸಿದ್ದು ಅದಕ್ಕಾಗಿ ಅಗತ್ಯ ತಂತ್ರಜ್ಞಾನಗಳನ್ನು ರೂಪಿಸುತ್ತಿದೆ. ಈ ನೀಲ ನಕ್ಷೆಯನ್ನು ಅಂತರಿಕ್ಷ ಆಯೋಗಕ್ಕೆ ಸಲ್ಲಿಸಲಾಗಿದೆ.

ಅಂತಿಮ ವಿಶ್ಲೇಷಣೆ ಮತ್ತು ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಂದಿನ ಚಂದ್ರನ ಪರಿಶೋಧನೆ ಕಾರ್ಯಾಚರಣೆಗೆ ಕೆಲಸ ಮುಂದುವರಿಯುತ್ತಿದೆ ಎಂದು ಜಿತೇಂದ್ರ ಸಿಂಗ್ ಸದಸ್ಯರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಚಂದ್ರಯಾನ-2 ಯೋಜನೆಯ ವೈಫಲ್ಯಗಳನ್ನು ಸರಿಯಾಗಿ ವಿಶ್ಲೇಷಿಸಿ ಮುಂದಿನ ಸಾರಿ ಈ ತಪ್ಪುಗಳು ಮರು ಕಳಿಸದಂತೆ ಚಂದ್ರಯಾನ-3 ಯೋಜನೆ ಯಶಸ್ವಿಯಾಗಲು ತಜ್ಞರುಗಳ ಸಮಿತಿ, ಸಂಘಟನೆಗಳು ಮತ್ತು ಹಿರಿಯ ವಿಜ್ಞಾನಿಗಳು ಸತತ ಕೆಲಸ ಮಾಡುತ್ತದೆ ಎಂದು ಇಸ್ರೋ ವಕ್ತಾರ ವಿವೇಕ್ ಸಿಂಗ್ ಈಗಾಗಲೇ ತಿಳಿಸಿದ್ದಾರೆ.

Comments are closed.