ಡಿಜಿಟಲ್ ಪಾವತಿ ಉತ್ತೇಜಿಸಲು ಡಿಸೆಂಬರ್ 1 ರಿಂದ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ ಒಂದರೊಳಗೆ ಫಾಸ್ಟ್ ಟ್ಯಾಗ್ ಪಡೆದಿಲ್ಲವೆಂದ್ರೆ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ.
ಟೋಲ್ ಪ್ಲಾಜಾದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗ್ತಿದೆ. ಒಂದು ಸಾಲು, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಸೀಮಿತ ಮಾಡಲಾಗುತ್ತದೆ. ಫಾಸ್ಟ್ ಟ್ಯಾಗ್ ರಾಷ್ಟ್ರೀಯ ಹೆದ್ದಾರಿಗಳಿಗೆ ಮಾತ್ರ ಕಡ್ಡಾಯವಾಗಿದ್ದು, ರಾಜ್ಯ ಹೆದ್ದಾರಿಗಳಿಗೆ ಇದು ಅನ್ವಯವಾಗುವುದಿಲ್ಲ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಫಾಸ್ಟ್ಯಾಗ್ ಜನಪ್ರಿಯಗೊಳಿಸಲು ಡಿಸೆಂಬರ್ 1 ರವರೆಗೆ ಉಚಿತವಾಗಿ ನೀಡಲಿದೆ. ಕಾರು ಸೇರಿದಂತೆ ದೊಡ್ಡ ವಾಹನಗಳಿಗೆ ಇನ್ನೂ ಫಾಸ್ಟ್ ಟ್ಯಾಗ್ ಪಡೆದಿಲ್ಲವೆಂದಾದ್ರೆ ಇಂದೇ NHAI ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಉಚಿತವಾಗಿ ಫಾಸ್ಟ್ ಟ್ಯಾಗ್ ಪಡೆಯಿರಿ.
ಒಂದು ವೇಳೆ ಡಿಸೆಂಬರ್ 1ರೊಳಗೆ ಫಾಸ್ಟ್ ಟ್ಯಾಗ್ ಪಡೆಯದೆ ಹೋದಲ್ಲಿ ನಂತ್ರ ಶುಲ್ಕ ನೀಡಬೇಕಾಗುತ್ತದೆ. ಫಾಸ್ಟ್ಯಾಗ್ ಪಡೆಯಲು, ನಿಮ್ಮ ವಾಹನ ನೋಂದಣಿ ಪ್ರಮಾಣಪತ್ರ, ಪಾಸ್‌ಪೋರ್ಟ್ ಗಾತ್ರದ ಫೋಟೋ, ವಿಳಾಸ ಪುರಾವೆ ಮತ್ತು ಇತರ ಕೆಲವು ದಾಖಲೆಗಳನ್ನು ನೀವು ಒದಗಿಸಬೇಕು. ನವೆಂಬರ್ 22ರಿಂದ ಡಿಸೆಂಬರ್ 1ರವರೆಗೆ ಮಾತ್ರ ಉಚಿತ ಫಾಸ್ಟ್ ಟ್ಯಾಗ್ ಲಭ್ಯವಾಗಲಿದೆ.

Comments are closed.