ಮುಂಬೈ : ಮುಂಬೈ ಮಲಾಡ್ ಪೂರ್ವದ ಕುರಾರ ವಿಲೇಜಿನಲ್ಲಿ ಇರುವ 45 ವರ್ಷಗಳ ಇತಿಹಾಸವಿರುವ ಶನಿ ಮಂದಿರದ ಬ್ರಹ್ಮಕಲಶೋತ್ಸವ ಮುಂದಿನ ವರ್ಷ 2020 ರಂದುನಡೆಯಲಿದ್ದು ಈ ಬಗ್ಗೆ ಸಮಾಲೋಚನೆ ಸಭೆ ನವೆಂಬರ್ 17ರಂದು ದೇವಸ್ಥಾನದಲ್ಲಿ ನಡೆಯಿತು
ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷರು ಗಳಾದ ಐತು ದೇವಾಡಿಗ ಬಾಬು ಏನ್ ಚಂದನ್ ಶ್ರೀ ಶನಿಮಹಾತ್ಮ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಧ್ಯಕ್ಷ ನಾರಾಯಣ್ ಶೆಟ್ಟಿ.. ಹಿರಿಯ ಸದಸ್ಯ ರಮೇಶ್ ರಾವ್ ದೇವಸ್ಥಾನದ ಪ್ರಧಾನ ಅರ್ಚಕ ತುಂಗಾ ರಾಘವೇಂದ್ರ ಭಟ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್ ಪೂಜಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಕೋಶಾಧಿಕಾರಿ ಹರೀಶ್ ಸಾಲಿಯಾನ್ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾಗಿ ಪತ್ರಕರ್ತ ದಿನೇಶ್ ಕುಲಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು
ಶನಿ ಮಂದಿರದಪೂಜಾ ಸಮಿತಿಯ ಸದಸ್ಯರಾಗಿರುವ ದಿನೇಶ್ ಕುಲಾಲ್ ಅವರು 2010ರಲ್ಲಿ ಕುಲಾಲ ಉತ್ಸವ ರೂವಾರಿಯಾಗಿ ದೇಶ-ವಿದೇಶದಸಾವಿರಾರು ಕುಲಾಲ ರನ್ನು ಒಗ್ಗೂಡಿಸಿದ ನಾಯಕ. 2018ರಲ್ಲಿ ಅಪ್ಪಾಜಿ ಬಿಡು ಫೌಂಡೇಶನ್ ಬೆಳ್ಳಿಹಬ್ಬದ ಅಧ್ಯಕ್ಷರಾಗಿ ಅಭೂತಪೂರ್ವ ಕಾರ್ಯಕ್ರಮದ ರುವಾರಿಯಾಗಿ ಸೇವೆ ಮಾಡಿದವರು.
2019ರ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ದಶಮಾನೋತ್ಸವದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅನುಭವಿ ಸಮಾಜಸೇವಕ ದಿನೇಶ್ ಕುಲಾಲ್ ಅವರ ಸೇವಾಕಾರ್ಯಕ್ಕೆ ಮತ್ತೊಂದು ಜವಾಬ್ದಾರಿ ಹುದ್ದೆ ಬ್ರಹ್ಮಕಲಶೋತ್ಸವದ ಸಂಚಾಲಕರಾಗಿ ನೇಮಕಗೊಂಡಿರುವುದು.

Comments are closed.