ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಕೀಲನ ಶವ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಪತಿ ಹತ್ಯೆಗೈದು ಅಡುಗೆ ಮನೆಯಲ್ಲಿ ಹೂತಿದ್ದ ಪತ್ನಿ ಅಲ್ಲಿಯೇ ಅಡುಗೆ ಮಾಡ್ತಿದ್ದಳಂತೆ.
ಘಟನೆ ಮಧ್ಯಪ್ರದೇಶದ ಅನುಪ್ಪೂರ್ ನಲ್ಲಿ ನಡೆದಿದೆ. ಪತಿ ನಾಪತ್ತೆಯಾಗಿದ್ದಾನೆಂದು ಒಂದು ತಿಂಗಳ ಹಿಂದೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಈ ಮಧ್ಯೆ ಮೃತ ವ್ಯಕ್ತಿ ಸಹೋದರ ಪೊಲೀಸರಿಗೆ ಮುಖ್ಯ ಮಾಹಿತಿ ನೀಡಿದ್ದಾನೆ. ಸಹೋದರನ ಮನೆಗೆ ಹೋದ್ರೆ ಅತ್ತಿಗೆ ಒಳಗೆ ಬಿಡ್ತಿಲ್ಲ. ವಾಸನೆ ಬರ್ತಿದೆ ಎಂದಿದ್ದಾನೆ.
ಪೊಲೀಸರು ಮನೆ ಮೇಲೆ ದಾಳಿ ನಡೆಸಿದಾಗ ವಾಸನೆ ಬಂದಿದೆ. ಅಡುಗೆ ಮನೆಯಲ್ಲಿ ವಾಸನೆ ಹೆಚ್ಚಾದ ಕಾರಣ ಅಲ್ಲಿ ಅಗೆದಿದ್ದಾರೆ. ಅಲ್ಲಿ ಶವ ಸಿಕ್ಕಿದೆ. ಪತಿಗೆ ಸಹೋದರನ ಪತ್ನಿ ಜೊತೆ ಅಕ್ರಮ ಸಂಬಂಧವಿತ್ತು. ಈ ಕಾರಣಕ್ಕೆ ಪತಿ ಸಹೋದರನ ಜೊತೆ ಸೇರಿ ಹತ್ಯೆಗೈದಿದ್ದೇನೆಂದು ಮಹಿಳೆ ಹೇಳಿದ್ದಾಳೆ. ಆದ್ರೆ ಸಹೋದರ ಇದನ್ನ ನಿರಾಕರಿಸಿದ್ದಾನೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ

Comments are closed.