ಕರ್ನಾಟಕ

ಹೆಲ್ಮೆಟ್ ಕಡ್ಡಾಯಗೊಳಿಸುವುದರ ಜೊತೆಗೆ ಹೊಸ ನಿಬಂಧನೆಗಳನ್ನು ವಿಧಿಸಿದ ಕೇರಳ ಹೈಕೋರ್ಟ್

Pinterest LinkedIn Tumblr

ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಅನ್ನು ಕೇರಳ ಹೈಕೋರ್ಟ್ ಕಡ್ಡಾಯಗೊಳಿಸುವುದರ ಜೊತೆಗೆ ಕೆಲವು ಹೊಸ ನಿಬಂಧನೆಗಳನ್ನು ವಿಧಿಸಿದೆ. ಈ ನಿಬಂಧನೆಗಳು ಮುಂದಿನ ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಎಂದು ಕೇರಳ ಹೈಕೋರ್ಟ್ ಅದೇಶ ನೀಡಿದೆ.

ಹೆಲ್ಮೆಟ್ ಧರಿಸದೇ ಇರುವವರನ್ನು ಮತ್ತು ಬೈಕ್ ಸವಾರರನ್ನು ತಪಾಸಣೆ ಮಾಡಲು ನಿಲ್ಲಿಸಲು ಸೂಚಿಸಿದಾಗ ಅದನ್ನು ನಿಲ್ಲಸದೇ ಬೈಕ್ ಸವಾರರು ಮುಂದೆ ಚಲಿಸಿದ ಸಂದರ್ಭದಲ್ಲಿ ಟ್ರಾಫಿಕ್ ಪೋಲಿಸರು ಅವರನ್ನು ಬೆನ್ನಟ್ಟುವಂತಿಲ್ಲವೆಂದು ಕೇರಳ ಹೈಕೋರ್ಟ್ ಹೇಳಿದೆ. ಪೊಲೀಸರು ಅಂತಹ ವಾಹನ ಬರುವ ಹಾದಿಯಲ್ಲಿ ಅಡ್ಡ ಬಂದು ತಡೆಯುವುದು ಅಥವಾ ದೈಹಿಕ ಬಲ ತೋರುವುದು ಮಾಡುವಂತಿಲ್ಲ.

ಈ ರೀತಿ ವಾಹನಗಳನ್ನು ಅಡ್ಡಗಟ್ಟಿದಾಗ ಅಪಘಾತ ಅಥವಾ ಪ್ರಾಣಪಾಯವಾಗುವ ಕಾರಣ ಟ್ರಾಫಿಕ್ ಪೊಲೀಸರು ಅವರನ್ನು ಪತ್ತೆಹಚ್ಚಲು ಹೆಚ್ಚು ಅಧುನಿಕ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಮೋಟಾರ್ ವಾಹನ ಡ್ರೈವಿಂಗ್ ನಿಯಂತ್ರಣ ಕಾಯ್ದೆ 2017ರ ನಿಯಮದಂತೆ ಟ್ರಾಫಿಕ್ ಪೊಲೀಸರು ವಾಹನವನ್ನು ಯಾವ ಕಾರಣಕ್ಕೆ ತಡೆಯಬಹುದು ಎಂಬುದರ ಬಗ್ಗೆ ಅಧಿಕೃತ ಪಟ್ಟಿ ತಯಾರಿಸಲು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಡಿಜಿಟಲ್ ಕ್ಯಾಮೆರಾ, ಟ್ರಾಫಿಕ್ ಸಿಸಿ ಕ್ಯಾಮೆರಾ, ಮೊಬೈಲ್ ಕ್ಯಾಮೆರಾ, ಇತರ ಅಧುನಿಕ ತಂತ್ರಜ್ಞಾನಗಳನ್ನು ಬಳಿಸಿ ಅವರನ್ನು ಪತ್ತೆಹಚ್ಚಬಹುದಾಗಿದೆ. ವಾಹನದ ದಾಖಲೆ, ಫಿಟೆನೆಸ್ ಸರ್ಟಿಫಿಕೇಟ್ ಮತ್ತು ಇನ್ನಿತರ ದಾಖಲೆಗಳನ್ನು ಪರಿಶೀಲಿಸಲು ಮತ್ತು ದ್ವಿಚಕ್ರ ವಾಹನದ ಅಗತ್ಯ ಮಾಹಿತಿ ಪಡೆಯಲು ಇವುಗಳನ್ನು ಬಳಸಬಹುದು.

ವಾಹನಗಳ ಪರಿಶೀಲನೆಗಾಗಿ ವಾಹನದ ಮುಂದೆ ನಿಂತು ಅಡ್ಡ ಹಾಕುವುದು ಅಥವಾ ಬೆನ್ನುಟ್ಟವ ಮೂಲಕ ಯಾವುದೇ ದೈಹಿಕವಾಗಿ ಆಡಚಣೆಯನ್ನು ಮಾಡಬಾರದು. ಇದು ಸವಾರರಿಗೆ ಅಲ್ಲದೇ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಗಳ ಜೀವಕ್ಕೂ ಅಪಾಯವನ್ನುಂಟು ಮಾಡಬಹುದು.

ಕೇರಳದ ಮಲಪ್ಪುರಂನ 18 ವರ್ಷದ ಅರ್ಜಿದಾರರಿಗೆ ಜಾಮೀನು ನೀಡುವ ಪ್ರಕರಣದಲ್ಲಿ ಕೇರಳದ ಹೈಕೋರ್ಟ್ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪಿ ಮತ್ತು ಆತನ ಸ್ನೇಹಿತ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ಅಡ್ಡ ಬಂದಾಗ ಟ್ರಾಫಿಕ್ ಪೊಲೀಸ್ ಎಡಗಾಲಿಗೆ ಬೈಕ್ ಅನ್ನು ಹತ್ತಿಸಿ ಪರಾರಿಯಾಗಲು ಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ರಸ್ತೆಯಲ್ಲಿ ಬಿದ್ದಿದರು.

ಕೋರ್ಟ್‍‍ನಲ್ಲಿ ಈ ಪ್ರಕರಣದ ಸವಾರನು ಪೊಲೀಸರಿಂದಾಗಿ ಅಪಘಾತವಾಗಿತ್ತು ಎಂಬ ವಾದವನ್ನು ಮಂಡಿಸಿದರು. ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಬೈಕಿನ ಅಡ್ಡ ಬಂದು ಬೈಕಿನ ಹ್ಯಾಂಡಲ್ ಬಾರ್ ಅನ್ನು ಹಿಡಿಯದಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ನ್ಯಾಯಲಯದಲ್ಲಿ ಸವಾರನು ವಾದ ಮಂಡಿಸಿದ್ದನು.

ದೇಶದಲ್ಲಿ ಈ ರೀತಿಯ ಹಲವಾರು ಪ್ರಕರಣಗಳು ಸಂಭವಿಸಿವೆ. ಪೊಲೀಸರು ಅಡ್ಡ ಬಂದಾಗ ಅವರಿಂದ ಬಜಾವ್ ಆಗಲು ಅಥವಾ ಸವಾರನು ಹೆದರಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ.

ಇಂದಿನ ಅಧುನಿಕ ಯುಗದಲ್ಲಿ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಟ್ರಾಫಿಕ್ ಪೊಲೀಸರು ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ಅದರ ನೋಂದಣೆ ಸಂಖ್ಯೆಯನ್ನು ಬಳಿಸಿ ಮಾಲೀಕನಿಗೆ ದಂಡದ ಚಲನ್ ಅಥವಾ ನೋಟಿಸ್ ಕಳುಹಿಸುವ ವಿಧಾನವನ್ನು ಅನುಸರಿಸಬಹುದಾಗಿದೆ.

Comments are closed.