ಅಂತರಾಷ್ಟ್ರೀಯ

ರೋಗಪೀಡಿತ ನಾಯಿಗಳು ಕಚ್ಚಿದ್ದರಿಂದ 6 ತಿಂಗಳ ಗರ್ಭಿಣಿ ಸಾವು

Pinterest LinkedIn Tumblr

ಪ್ಯಾರಿಸ್​​: ಈಕೆ 6 ತಿಂಗಳ ಗರ್ಭಿಣಿ. ಪ್ರತಿದಿನ ಸಂಜೆ ತನ್ನ ನಾಯಿಗಳೊಂದಿಗೆ ವಾಕ್​ ಮಾಡುವುದಕ್ಕಾಗಿ ಹತ್ತಿರದ ಕಾಡಿಗೆ ಹೋಗುತ್ತಿದ್ದ ರು. ಎಂದಿನಂತೆ ಕಳೆದ ಶನಿವಾರ ಕೂಡ ವಾಕ್​ಗೆ ಹೋಗಿದ್ದರು. ಆದರೆ ತಿರುಗಿಬರಲೇ ಇಲ್ಲ.

ಇದೊಂದು ಭಯಾನಕ ಘಟನೆ ನಡೆದಿದ್ದು ಫ್ರಾನ್ಸ್ ಉತ್ತರ ಭಾಗದಲ್ಲಿರುವ ಸೇಂಟ್-ಪಿಯರೆ ಐಗೆಲ್ ಗ್ರಾಮದ ಬಳಿ ಇರುವ ರೆಟ್ಜ್​ ಕಾಡಿನಲ್ಲಿ. ಶನಿವಾರವೇ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.

29ವರ್ಷದ ಗರ್ಭಿಣಿ ಎಂದಿನಂತೆ ಕಾಡಿಗೆ ಹೋದ ಸಮಯದಲ್ಲಿ ಅಲ್ಲಿ ಅನೇಕ ನಾಯಿಗಳು ಬೇಟೆಯಲ್ಲಿ ತೊಡಗಿಕೊಂಡಿದ್ದವು. ಈಕೆಯನ್ನು ನೋಡುತ್ತಲೇ ಬೆನ್ನಟ್ಟಿ ಬಂದು ಕಚ್ಚಿವೆ. ಕಾಲುಗಳಿಗೆ, ತಲೆಗೆ ಎಲ್ಲ ಕಡೆಗಳಲ್ಲೂ ಕಚ್ಚಿಗಾಯಗೊಳಿಸಿವೆ. ಪರಿಣಾಮ ವಿಪರೀತ ರಕ್ತಸ್ರಾವವಾಗಿ ಆಕೆ ಮೃತಪಟ್ಟಿದ್ದಾಳೆಂದು ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕೆ ಪ್ರತಿದಿನ ವಾಕಿಂಗ್​ಗೆ ಹೋಗುತ್ತಿದ್ದಳು. ಜತೆಗೆ ಅವಳು ಸಾಕಿದ ನಾಯಿಗಳೂ ಇರುತ್ತಿದ್ದವು. ಶನಿವಾರ ಕಾಡಿಗೆ ಹೋಗಿ ತುಂಬ ಹೊತ್ತಾದರೂ ಅವಳು ಬರಲಿಲ್ಲ. ಆಗ ನಾನು ಅಲ್ಲಿಗೆ ಹೋಗಿ ನೋಡಿದೆ. ನಾಯಿಗಳು ಕಚ್ಚಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯ ಮೇಲೆ ಬಟ್ಟೆ ಕೂಡ ಇರಲಿಲ್ಲ. ನಾನು ಅಲ್ಲಿಯೇ ಇದ್ದ ನಾಯಿಗಳನ್ನೂ ನೋಡಿದೆ. ನಮ್ಮ ಮನೆಯ ನಾಯಿಯನ್ನು ಕರೆದೆ. ಆದರೆ ಹತ್ತಿರ ಬಾರದೆ, ಬೊಗಳುವ ಮೂಲಕ ನನ್ನನ್ನೂ ಅದು ಎಚ್ಚರಿಸಿತು.

ಸ್ವಲ್ಪ ಮುಂದೆ ಹೋಗಿ ನೋಡಿದರೆ ದೂರದಲ್ಲಿ 30ಕ್ಕಿಂತಲೂ ಅಧಿಕ ನಾಯಿಗಳು ಕಂಡವು. ನಾನು ಹಿಂತಿರುಗಿ ಬಂದೆ ಎಂದು ಮೃತ ಗರ್ಭಿಣಿಯ ಪತಿ ತಿಳಿಸಿದ್ದಾರೆ.

ಹೀಗೆ ಕಚ್ಚಿದ ಕೆಲವು ನಾಯಿಗಳು ರೋಗಪೀಡಿತವಾಗಿದ್ದವು ಎಂಬುದೂ ಕೂಡ ಗೊತ್ತಾಗಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Comments are closed.