ಕರ್ನಾಟಕ

ಓದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ 105 ವರ್ಷದ ಭಾಗೀರಥಿ ಅಮ್ಮನೇ ಸಾಕ್ಷಿ.

Pinterest LinkedIn Tumblr

ತಿರುವನಂತಪುರಂ: ಓದಿಗೆ ವಯಸ್ಸಿನ ಮಿತಿಯಿಲ್ಲ. ಉತ್ಸಾಹ ಹಾಗೂ ಛಲ ಓದಿಗೆ ಮುಖ್ಯ ಎಂದು ಕೇರಳದ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ನಿರೂಪಿಸಿದ್ದಾರೆ. ಕೇರಳ ಸರ್ಕಾರದ ಸಾಕ್ಷರತಾ ಮಿಷನ್​ನ ಆಯೋಜಿಸಿದ್ದ ನಾಲ್ಕನೇ ತರಗತಿ ತತ್ಸಮಾನ ಪರೀಕ್ಷೆಯನ್ನು 105 ವರ್ಷದ ಭಾಗೀರಥಿ ಅಮ್ಮ ಎಂಬುವವರು ಬರೆದಿದ್ದಾರೆ.

ಓದಿನ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು, ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಹಿರಿಯಳಾದ ಕಾರಣ ಕಿರಿಯ ಸಹೋದರರನ್ನು ನೋಡಿಕೊಳ್ಳುವ ಭಾರ ಹೆಗಲೇರಿತ್ತು . ಆಹಾಗಿ 3 ನೇ ತರಗತಿಯಲ್ಲಿ ಶಾಲೆಯಿಂದ ಹೊರಗುಳಿದಿದ್ದರು.

ಸಣ್ಣವಯಸ್ಸಿಗೆ ಮದುವೆಯಾದ ಭಗೀರತಿ ಅಮ್ಮ ವಿಧಿಯಾಟವೋ ಏನೋ ತನ್ನ 30 ನೇ ವಯಸ್ಸಿನಲ್ಲಿ ಗಂಡನನ್ನೂ ಕಳೆದುಕೊಂಡಳು. ಇದರಿಂದ ನಾಲ್ಕು ಹೆಣ್ಣು ಮಕ್ಕಳು ಸೇರಿ ಆರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಗಲೇರಿತು.

ಓದಬೇಕೆಂಬ ಬಲವಾದ ತುಡಿತವನ್ನು ಮನದಲ್ಲೇ ಇಟ್ಟುಕೊಂಡಿದ್ದ ಅವರು, ಇತ್ತೀಚೆಗೆ ಕೊಲ್ಲಂನಲ್ಲಿ ಸಾಕ್ಷರತಾ ಮಿಷನ್​ನಡಿ ನಾಲ್ಕನೇ ತರಗತಿ ತತ್ಸಮಾನ ಪರೀಕ್ಷೆ ಬರೆದಿದ್ದಾರೆ. ಈ ಮೂಲ ಮನದ ಆಸೆಯನ್ನು ಸ್ವಲ್ಪಮಟ್ಟಿಗೆ ಈಡೇರಿಸಿಕೊಂಡಿದ್ದಾರೆ. ಅಲ್ಲದೇ ಕೇರಳ ಸಾಕ್ಷರತಾ ಮಿಷನ್ ಯೋಜನೆಯಡಿ ಶಾಲೆ ಪರೀಕ್ಷೆಗೆ ತತ್ಸಮಾನ ಪರೀಕ್ಷೆ ಬರೆದ ಅತ್ಯಂತ ಹಿರಿಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇಳಿವಯಸ್ಸಿನಲ್ಲೂ ಭಾಗೀರಥಿ ಅಮ್ಮ ಚುರುಕಾದ ಬುದ್ಧಿಶಕ್ತಿ ಹೊಂದಿದ್ದಾರೆ. ಯಾವುದೇ ಕಣ್ಣಿನ ಮತ್ತು ಸಂಜ್ಞಾ ದೋಷಗಳು ಇಲ್ಲ. ನಾಲ್ಕನೇ ತರಗತಿ ಪರೀಕ್ಷೆ ಬರೆದಿದ್ದಕ್ಕೆ ಸಾಕಷ್ಟು ಸಂತೋಷಗೊಂಡಿದ್ದಾರೆ ಎಂದು ಭಾಗೀರಥಿ ಅಮ್ಮನವರ ಮಗ ಕುಮಾರ್ ತಿಳಿಸಿದ್ದಾರೆ.

Comments are closed.