ಕರ್ನಾಟಕ

13 ಪುಟ್ಟ ಉಪಗ್ರಹಗಳೊಂದಿಗೆ ಕಾಟೋಸ್ಯಾಟ್-3 ಸ್ಯಾಟಿಲೈಟ್‍ನ ಉಡ್ಡಯನಗೆ ಸಕಲ ಸಿದ್ಧತೆ

Pinterest LinkedIn Tumblr

ಬೆಂಗಳೂರು: ಕೊನೆ ಕ್ಷಣದಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆ ವಿಫಲವಾದರೂ ವಿಶ್ವಾದ್ಯಂತ ಅಪಾರ ಪ್ರಶಂಸೆಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೇ ತಿಂಗಳ 25ರಂದು ಮತ್ತೊಂದು ಪ್ರಮುಖ ಸಾಧನೆಗೆ ಸಜ್ಜಾಗಿದೆ. ಅಮೆರಿಕದ 13 ವಾಣಿಜ್ಯ ಪುಟ್ಟ ಉಪಗ್ರಹಗಳೊಂದಿಗೆ ಕಾಟೋಸ್ಯಾಟ್-3 ಇಮೆಜಿಂಗ್ ಅಂಡ್ ಮಾಪಿಂಗ್ ಸ್ಯಾಟಿಲೈಟ್‍ನನ್ನು ಉಡ್ಡಯನ ಮಾಡಲು ಇಸ್ರೋ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(ಎಸ್‍ಡಿಎಸ್‍ಸಿ)ದಿಂದ ಪಿಎಸ್‍ಎಲ್‍ವಿ-ಸಿ47 ಉಪಗ್ರಹ ವಾಹನ ಉಡಾವಣೆ ನೌಕೆ ಮೂಲಕ ಈ 14 ಉಪಗ್ರಹಗಳನ್ನು ಸೂರ್ಯ ಸ್ಥಿರ ಕಕ್ಷೆ (ಸನ್ ಸಿಂಕ್ರೋನಸ್ ಆರ್ಬಿಟ್)ಗೆ ಉಡಾವಣೆ ಮಾಡಲಿದೆ.

ವಾತಾವರಣ ಪರಿಸ್ಥಿತಿ ಒಳಪಟ್ಟು ಮುಂದಿನ ಸೋಮವಾರ (ನ.25) ಭಾರತೀಯ ಕಾಲಮಾನ ಬೆಳಗ್ಗೆ 9.28ಕ್ಕೆ ಸರಿಯಾಗಿ ಕಾರ್ಟೊಸ್ಯಾಟ್-3 ಮತ್ತು ಇತರ 13 ಕಮರ್ಷಿಯಲ್ ನ್ಯಾನೋ ಸ್ಯಾಟಿಲೈಟ್‍ಗಳನ್ನು ನಭಕ್ಕೆ ಚಿಮ್ಮಿಸಲಾಗುವುದು ಎಂದು ಇಸ್ರೋ ಹೇಳಿದೆ.

ಕಾರ್ಟೊಸ್ಯಾಟ್-3, ಮೂರನೇ ಶ್ರೇಣಿಯ ಅತ್ಯಾಧುನಿಕ ಕಣ್ಗಾವಲು ಉಪಗ್ರಹವಾಗಿದ್ದು, ಭೂಮಿಯ ಅತ್ಯಧಿಕ ರೆಸೆಲ್ಯೂಷ್ ಪ್ರತಿಬಿಂಬಗಳನ್ನು ರವಾನಿಸುವ ಸಾಮಥ್ರ್ಯ ಹೊಂದಿದೆ. ಈ ಉಪಗ್ರಹವನ್ನು ಭೂಮಿಯಿಂದ 509 ಕಿ.ಮೀ. ದೂರದಲ್ಲಿ 97.5 ಡಿಗ್ರಿಗಳ ಓರೆ ಕೋನಲ್ಲಿ ಇರಿಸಲಾಗುತ್ತದೆ.

ಪಿಎಸ್‍ಎಲ್‍ವಿ-47 ನೌಕೆಗೆ ಇದು ಈ ಶ್ರೇಣಿಯ ಉಪಗ್ರಹ ಉಡಾವಣೆಯಲ್ಲಿ 21ನೇ ಕಾರ್ಯವಾಗಿದೆ. ಇದು ಅಮೆರಿಕದ 13 ಪುಟ್ಟ ಉಪಗ್ರಹಗಳನ್ನೂ ಸಹ ಅಂತರಕ್ಷಕ್ಕೆ ಹೊತ್ತೊಯ್ಯಲಿದೆ. ಈ ಉಡಾವಣೆಗೆ ಭಾರತದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‍ಸ್‍ಐಎಲ್) ಮತ್ತು ಅಮೆರಿಕ ಜೊತೆ ಒಪ್ಪಂದವಾಗಿದೆ.

Comments are closed.