ಕರ್ನಾಟಕ

ಟ್ರೆಂಡ್ ಆದ ಡೇಟಿಂಗ್ ಆ್ಯಪ್ – ಪರಿಚಯ ಇಲ್ಲದವರ ಜೊತೆಗೆ ಮೋಜು-ಮಸ್ತಿ

Pinterest LinkedIn Tumblr


ಬೆಂಗಳೂರು: ಡೇಟಿಂಗ್ ಆ್ಯಪ್ ಬಳಸುವುದರಲ್ಲಿ ಬೆಂಗಳೂರು ಈಗ ಟಾಪ್ 2 ಸ್ಥಾನ ಪಡೆದುಕೊಂಡಿದ್ದು, ನಮ್ಮ ಯುವ ಜನತೆ ನಿಜಕ್ಕೂ ಸೇಫ್ ಆಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಯುವ ಸಮೂಹವೇ ಹೆಚ್ಚಾಗಿ ಡೇಟಿಂಗ್ ಆ್ಯಪ್ ಕ್ರೇಜ್‍ಗೆ ಒಳಗಾಗಿದ್ದಾರೆ. ಯಾರು, ಏನು ಅನ್ನೋದು ಗೊತ್ತಿಲ್ಲದೇ, ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಯುವ ಜನ ಒಳಗಾಗಿ ಈ ಡೇಟಿಂಗ್ ಕ್ರೇಜ್ ಹೆಚ್ಚು ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲಾ ರಾಜ್ಯದ, ಹಲವು ದೇಶಗಳ ಜನ ವಾಸ ಮಾಡುತ್ತಾರೆ. ಅವರು ಈ ಆ್ಯಪ್‍ಗಳ ಮೂಲಕ ರಿಲೇಶನ್‍ಶಿಪ್‍ಗಾಗಿ ಹುಡುಕಾಟ ಮಾಡುತ್ತಿರುತ್ತಾರೆ. ಹೀಗಾಗಿಯೇ ಬೆಂಗಳೂರು 2ನೇ ಸ್ಥಾನಕ್ಕೆ ಬರಲು ಪ್ರಮುಖ ಕಾರಣ ಇರಬಹುದು ಎಂದು ಆ್ಯಪ್ ತಜ್ಞರು ಹೇಳುತ್ತಾರೆ.

ಈ ಡಿಜಿಟಲ್ ಯುಗದಲ್ಲಿ ಎಲ್ಲಕ್ಕೂ ಆ್ಯಪ್‍ಗಳು ಬಂದುಬಿಟ್ಟಿವೆ. ಯಾವುದೇ ವಿಷಯಕ್ಕೂ ಆ್ಯಪ್ ಇಲ್ಲ ಎನ್ನುವ ಹಾಗಿಲ್ಲ. ಯುವ ಜನ ಮುಖ ಪರಿಚಯ ಇಲ್ಲದವರ ಸ್ನೇಹ ಮಾಡಿ ಸಿನಿಮಾಗಳ ರೀತಿ ಕನಸು ಕಾಣುತ್ತಿರುತ್ತಾರೆ. ಇದು ಒಂದು ಮಟ್ಟಕ್ಕಿದ್ದರೆ ಪರವಾಗಿಲ್ಲ ಆದರೆ ಆ್ಯಪ್‍ನಲ್ಲೇ ಬದುಕಿದ್ರೆ ಪಕ್ಕಾ ಡೆಂಜರ್ ಎಂದು ಜನ ಮಾತನಾಡುತ್ತಿದ್ದಾರೆ.

ಬೆಂಗಳೂರು ಬೇರೆ ವಿಷಯಗಳಲ್ಲಿ ಟಾಪ್ ಬಂದರೆ ಖುಷಿಯಾಗುತ್ತೆ. ಆದರೆ ಈ ಆ್ಯಪ್ ಬಳಕೆಗಳನ್ನು ಕಡಿಮೆ ಮಾಡಿದರೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವುದು ಎಲ್ಲರ ಆಶಯ.

Comments are closed.