ಕರ್ನಾಟಕ

ಮದ್ರಾಸ್‌ನ ಐಐಟಿಯ ಹೊಸ ಸಂಶೋಧನೆ ಹೊಸ ಮಾದರಿಯ ಗಾಲಿ ಕುರ್ಚಿ “ಅರೈಸ್‌”

Pinterest LinkedIn Tumblr

ಚೆನ್ನೈ : ಐಐಟಿ ಮದ್ರಾಸ್‌ನ ‘ಟಿಟಿಕೆ ಸೆಂಟರ್‌ ಫಾರ್‌ ರಿಹಬಿಲಿಟೇಶನ್‌ ರಿಸರ್ಚ್‌ ಆಯಂಡ್‌ ಡಿವೈಸ್‌ ಡೆವಲಪ್‌ಮೆಂಟ್‌’ (ಆರ್‌2ಡಿ2) ವಿಕಲಚೇತನರಿಗಾಗಿ ಹೊಸ ಸಂಶೋಧನೆ ಮಾಡಿದೆ. ವಿಕಲಚೇತನರು ವ್ಹೀಲ್‌ಚೇರ್‌ನಲ್ಲಿ ಕುಳಿತಿರಲೇಬೇಕು, ಯಾವತ್ತೂ ಎದ್ದು ನಿಲ್ಲಲ್ಲು ಅವರಿಗೆ ಸಹಾಯವಾಗುತ್ತಿರಲಿಲ್ಲ, ಆದರೆ ಇನ್ನುಮುಂದೆ ವ್ಹೀಲ್‌ಚೇರ್‌ನಲ್ಲಿಯೇ ಅವರು ನಿಂತುಕೊಳ್ಳಬಹುದಾಗಿದೆ.

ಈ ಸಮಾರಂಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್‌ ಗೆಹ್ಲೊಟ್‌ ಹಾಜರಿದ್ದರು.ಐಐಟಿ ಮದ್ರಾಸ್‌ ಹಾಗೂ ಫೋನಿಕ್ಸ್‌ ಮೆಡಿಕಲ್‌ ಸಿಸ್ಟಮ್ಸ್‌ ಎಂಬ ಸಂಸ್ಥೆ ಪರಸ್ಪರ ಕೈ ಜೋಡಿಸಿ ಈ ಉತ್ಪನ್ನವನ್ನು ತಯಾರಿಸಲಾಗಿದೆ.

ಐಐಟಿ ಮದ್ರಾಸ್‌ನ ‘ಟಿಟಿಕೆ ಸೆಂಟರ್‌ ಫಾರ್‌ ರಿಹಬಿಲಿಟೇಶನ್‌ ರಿಸರ್ಚ್‌ ಆಯಂಡ್‌ ಡಿವೈಸ್‌ ಡೆವಲಪ್‌ಮೆಂಟ್‌’ (ಆರ್‌2ಡಿ2) ವಿಭಾಗದ ಮುಖ್ಯಸ್ಥೆ ಪ್ರೊಫೆಸರ್‌ ಸುಜಾತಾ ಶ್ರೀನಿವಾಸನ್‌ ಅವರು ಈ ಉತ್ಪನ್ನದ ಮೇಲ್ವಿಚಾರಣೆ ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶೀಯವಾಗಿ ನಿರ್ಮಿಸಲಾದ ಹೊಸ ಮಾದರಿಯ ಗಾಲಿ ಕುರ್ಚಿಗೆ ‘ಅರೈಸ್‌’ ಎಂದು ಹೆಸರಿಡಲಾಗಿದ್ದು, ಇದು ಸಂಪೂರ್ಣವಾಗಿ ದೇಶೀಯವಾಗಿ ಉತ್ಪಾದಿಸಲ್ಪಟ್ಟ ಸಾಧನವಾಗಿದೆ ಎಂದು ಐಐಟಿ ಮದ್ರಾಸ್‌ ವತಿಯಿಂದ ನೀಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.