ಕರ್ನಾಟಕ

ಕೋಟೆ ನಾಡಿನಲ್ಲಿ ಭಾರೀ ಮಳೆಗೆ ಕುಸಿದ ಶಾಸಕ ಗೂಳಿಹಟ್ಟಿ ಶೇಖರ್​ ಮನೆ

Pinterest LinkedIn Tumblr


ಚಿತ್ರದುರ್ಗ (ಅ.25): ಕೋಟೆ ನಾಡಿನಲ್ಲಿ ಈ ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಬರದ ನಾಡಿನಲ್ಲಿ ಸುರಿಯುತ್ತಿರುವ ಮಳೆ ಜನರಲ್ಲಿ ಹರ್ಷ ಜೊತೆ ಸಂಕಷ್ಟವನ್ನು ತಂದೊಡ್ಡಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಶಾಸಕ ಗೂಳಿಹಟ್ಟಿ ಶೇಖರ್​ ಅವರ ಮನೆ ಕುಸಿದಿದ್ದು, ಅವರ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸದುರ್ಗದಲ್ಲಿ ನಿಂರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೂಳಿಹಟ್ಟಿ ಶೇಖರ್​ ಅವರ ತಂದೆ ಕಟ್ಟಿಸಿದ್ದ ಮನೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ಅವರ ತಾಯಿಯೊಬ್ಬರೇ ಇದ್ದು, ಅವರಿಗೆ ಯಾವುದೇ ಹಾನಿಯಾಗಿಲ್ಲ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ, ಹೆಚ್ಚು ಮಳೆಯಿಂದ ನಮ್ಮ ಮನೆಯೂ ಬಿದ್ದಿದೆ. ಮನೆಯಲ್ಲಿ ತಾಯಿ ಒಬ್ಬರೇ ಇರುತ್ತಿದ್ದರು. ಅದು ನನ್ನ ತಂದೆ ಕಟ್ಟಿದ ಮನೆ ಹಾಗಾಗಿ ಅಲ್ಲಿದ್ದರು. ಶಾಸಕ, ಮಂತ್ರಿ ಆದರೂ ಕೂಡ ನಾನು ಮನೆ ಕಟ್ಟಿರಲಿಲ್ಲ. ಮನೆ ಕಟ್ಟಬೇಕು ಅನ್ನೋ ನೋವಿತ್ತು, ಈಗ ಮನೆ ಬಿದ್ದಿದೆ. ಮುಂದೆ ಮನೆ ಕಟ್ಟಬೇಕು ಎಂದು ಮನೆ ಬಿದ್ದದ್ದನ್ನ ನೆನೆದು ಕಣ್ಣೀರಿಟ್ಟರು.

ನಮ್ಮ ಊರು ಎಂದರೆ ನನಗೆ ತುಂಬಾ ಇಷ್ಟ. ಊರಿಗೆ ಹೋದಾಗಲೆಲ್ಲ ಅಲ್ಲೆ ಇರುತ್ತಿದ್ದೆ. ನಾನು ಸತ್ತಮೇಲೆ ಮನೆ ಯಾರಿಗೆ ಕೊಡುತ್ತೀಯ ಎನ್ನುತ್ತಿದ್ದರು ನನ್ನ ತಾಯಿ. ನಾನು ಮಂತ್ರಿಯಾಗಿದ್ದಾಗ ಮನೆ ಕೂಡ ಕಟ್ಟಲಿಲ್ಲ. ಬಡವರಿಗಿಂತ ನಾನು ಮನೆ ಕಟ್ಟಿದರೆ ಜನ ಬೈಯುತ್ತಾರೆ ಎಂದು ಮನೆ ಕಟ್ಟಲಿಲ್ಲ. ಈಗ ಮನೆ ಬಿದ್ದದ್ದು ಪ್ರಚಾರ ಬೇಡ ಎಂದಿದ್ದೆ. ಆದ್ರೆ ಯಾರೋ ನೋಡಿಕೊಂಡು ಸುದ್ದಿ‌ ಮಾಡಿದ್ದಾರೆ. ಈಗ ಮನೆ ಬಿದ್ದದ್ದರಿಂದ ಸಣ್ಣದೊಂದು ಮನೆ ಕಟ್ಟುತ್ತೇನೆ ಎಂದರು.

Comments are closed.