ಕರ್ನಾಟಕ

ಎಂಟರೋಟಾಕ್ಸಿಮಿಯ ಬ್ಯಾಕ್ಟೀರಿಯಾ ಸೋಂಕಿಗೆ 60ಕ್ಕೂ ಹೆಚ್ಚು ಕುರಿಗಳು ಬಲಿ

Pinterest LinkedIn Tumblr

(File photo) ಶಿಕಾರಿಪುರ : ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿ 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ಯರೆಕಟ್ಟೆ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

ಸಂಚಾರಿ ಕುರಿಗಾರರು ನಿನ್ನೆ ರಾತ್ರಿ ಶಿಕಾರಿಪುರ ತಾಲೂಕಿನ ಯರೆಕಟ್ಟೆ ಬಳಿ ಕುರಿಗಳೊಂದಿಗೆ ತಂಗಿದ್ದರು. ಬೆಳಿಗ್ಗೆ ಅವನ್ನು ಮೇಯಿಸಲು ಹೋಗಿದ್ದ ಸಂದರ್ಭ ಒಂದಾದ ಮೇಲೊಂದು ಕುರಿಗಳು ಸಾವನ್ನಪ್ಪಿವೆ. ಸರಿಸುಮಾರು 65ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ತಂಡ ಧಾವಿಸಿ ಕುರಿಗಳ ಸಾವಿನ ಕುರಿತು ಪರೀಕ್ಷೆ ನಡೆಸಿದೆ. ಪ್ರಯೋಗಾಲಯದ ತಜ್ಞರು ಈ ಕುರಿಗಳ ಸಾವಿಗೆ (ಎಂಟರೋಟಾಕ್ಸಿಮಿಯ) ಕರಳುಬೇನೆ ಬ್ಯಾಕ್ಟೀರಿಯಾ ಕಾರಣ ಎಂದಿದ್ದಾರೆ. ಈ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಕುರಿಗಳ ಕರುಳಿನಲ್ಲಿ ರಕ್ತಸ್ರಾವ ಉಂಟಾಗಿ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಉಳಿದ ಕುರಿಗಳಿಗೆ ಆಂಟಿ ಬಯೋಟಿಕ್ ಚುಚ್ಚುಮದ್ದು ನೀಡಲಾಗಿದೆ. ಗುರುವಾರ ಕೂಡ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ಇದೇ ಸಮಸ್ಯೆಯಿಂದ ನೂರಾರು ಕುರಿಗಳು ಸಾವನ್ನಪ್ಪಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಜಯಣ್ಣ, “ಈಗಾಗಲೇ 68ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಇನ್ನುಳಿದ ಕುರಿಗಳಿಗೆ ಚುಚ್ಚು ಮದ್ದು ನೀಡಲಾಗಿದೆ. ಪಶು ಸಂಗೋಪನಾ ಇಲಾಖೆ ವತಿಯಿಂದ ಸಾವನ್ನಪ್ಪಿದ ಒಂದು ಕುರಿಗೆ 5000 ಸಾವಿರ ಪರಿಹಾರ ನೀಡಲು ಅವಕಾಶವಿದೆ. ತಹಶೀಲ್ದಾರ್ ಹಾಗೂ ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳ ಬಳಿ ಚರ್ಚಿಸಿ ಪರಿಹಾರ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

Comments are closed.