ಕರ್ನಾಟಕ

ಮತ್ತೆ ಮೋದಿ ಕುರಿತು ಮೃದು ಧೋರಣೆ ತೋರಿದ ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ: ಪರಿಸರಕ್ಕೆ ಪ್ಲಾಸ್ಟಿಕ್​ ಮಾರಕ. ಹವಾಮಾನ ಬದಲಾವಣೆ ದೃಷ್ಟಿಯಿಂದ ಪ್ಲಾಸ್ಟಿಕ್​ ಬಳಕೆ ಸಂಪೂರ್ಣ ನಿಲ್ಲಬೇಕು. ಈ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ಜನತೆ ಉಪಯೋಗಿಸುವುದನ್ನು ತ್ಯಜಿಸುವುದಕ್ಕೆ ಪ್ರಧಾನಿ ಮೋದಿ ಅವರು ಮಾಡಿದ ಕಾರ್ಯ ಪ್ರೇರಣೆ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳುವ ಮೂಲಕ ಮತ್ತೆ ಮೋದಿ ಅವರ ಮೇಲೆ ಮೃದು ಧೋರಣೆ ತೋರಿದ್ದಾರೆ.

ಮಂಡ್ಯದ ಮಹದೇಶ್ವರಪುರ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್​ಡಿಕೆ, ಮೋದಿ ಅವರು ಸಮುದ್ರ ತೀರದಲ್ಲಿ ಪ್ಲಾಸ್ಟಿಕ್​ ಆಯುವ ಮೂಲಕ ಜನರು ಪ್ಲಾಸ್ಟಿಕ್ ತ್ಯಜಿಸುವುದಕ್ಕೆ ಪ್ರೇರಣೆಯಾಗಿದ್ದಾರೆ. ಇದು ಸಮಾಜಕ್ಕೆ ಒಳಿತು ಎಂದು ಹೇಳಿದರು.

ಒಳ್ಳೆಯವರಿಗೆ, ಪ್ರಾಮಾಣಿಕವಾಗಿ ಬಡವರಿಗೆ ಸ್ಪಂದಿಸುವವರಿಗೆ ಇದು ಒಳ್ಳೆಯ ಕಾಲ ಅಲ್ಲ. ಈ ಮಾತನ್ನು ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಯಾಕೆಂದರೆ ನನ್ನನ್ನು ಬೆಳೆಸಿದ ನೀವೇ ನನ್ನ ಬಗ್ಗೆ ಅನುಮಾನಪಟ್ಟಾಗ ನಾನು ಯಾರಿಗೋಸ್ಕರ ಮಾಡಬೇಕು. ಎರಡು ಹೊತ್ತು ಅನ್ನ ತಿನ್ನುವುದಕ್ಕೆ ಇದರ ಅವಶ್ಯಕತೆ ಇದೆಯಾ? ಎಂದು ಪ್ರಶ್ನೆ ಮಾಡಿದರು.

ಇನ್ನು ನಿರ್ಮಾಲಾನಂದ ಶ್ರೀ ಮತ್ತು ಸುತ್ತೂರು ಶ್ರೀಗಳ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಫೋನ್ ಟ್ಯಾಪ್ ಮಾಡಿಸಿ ನಾನು ರಾಜಕೀಯ ಮಾಡೋದು ಏನಿದೆ?. ಯಾವ ಮಟ್ಟಿಗೆ ಇಂದಿನ ರಾಜ್ಯ ರಾಜಕಾರಣ ಹೋಗಿದೆ ಅಂದ್ರೆ ಯಾರನ್ನು‌ ಯಾರು ನಂಬಬೇಕು ಎಂಬುದೇ ಗೊತ್ತಾಗಂತಹ ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Comments are closed.